ಬೆಂಗಳೂರು:-ಇನ್ನೊಂದು ವಾರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಎಲ್ಲರದ್ದು ಹೊರಬರಲಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಾಕಷ್ಟು ವಿಚಾರ ಇದೆ ಅಂತ ಖಾಸಗಿ ಚಾನಲ್ನಲ್ಲಿ ನೋಡಿದ್ದೇನೆ. ಇನ್ನೊಂದು ವಾರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಎಲ್ಲರದ್ದು ಹೊರಬರಲಿದೆ. ಕುಮಾರಸ್ವಾಮಿ ಮತ್ತು ವಿಜಯೇಂದ್ರ ಬಗ್ಗೆ ನಾವೇನು ತೆಗೆಯೋದಕ್ಕೆ ಹೋಗಲ್ಲ. ಬಿಜೆಪಿಯವರು ಕುಮಾರಸ್ವಾಮಿ ಅವರನ್ನು ತೆಗೆಯುತ್ತಾರೆ ಪ್ರಕರಣ ಹೊರ ಬರುತ್ತದೆ ಎಂದಿದ್ದಾರೆ.
ಗಂಡಸರೇ ಈ ರಹಸ್ಯ ನಿಮಗೆ ತಿಳಿದಿರಲಿ: ನಿಮ್ಮ ಲೈಂಗಿಕ ಜೀವನ ಸಖತ್ ಖುಷಿ ಇರತ್ತೆ!
ಡಿಕೆ ಶಿವಕುಮಾರ್ ಬಗ್ಗೆ ಮಾತನಾಡದಿದರೆ ಹೆಚ್.ಡಿ.ಕುಮಾರಸ್ವಾಮಿಗೆ ನಿದ್ದೆ ಬರಲ್ಲ. ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ರಾಜ್ಯಪಾಲ ಗೆಹ್ಲೋಟ್ ನಿರ್ಧಾರದ ಮೇಲೆ ನಮಗೆ ನಿರೀಕ್ಷೆ ಇಲ್ಲ. ಶಿಕ್ಷೆ ಕೊಟ್ಟರೇ ಅಂದಿನ ಮುಡಾ ಅಧ್ಯಕ್ಷರ ಮೇಲೂ ಕ್ರಮ ಆಗಬೇಕು. ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆ ತಪ್ಪು ಅಂತ ಹೇಳುತ್ತಿಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಸೌಲಭ್ಯಗಳು ರಾಜ್ಯಕ್ಕೆ ಬರ್ತಿಲ್ಲ. ಕೇಂದ್ರದ ಬಳಿ ಹೆಚ್.ಡಿ.ಕುಮಾರಸ್ವಾಮಿ ಕೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಡಿಕೆ ಶಿವಕುಮಾರ್ ನಡುವೆ ಟಾಕ್ ವಾರ್ ವಿಚಾರವಾಗಿ ಮಾತನಾಡಿದ ಅವರು, ಅವರು ಬೇರೆ ರೀತಿ ಸಂಪಾದನೆ ಮಾಡಿದ್ದರೆ ಹೇಳಲಿ. ಅದರಲ್ಲಿ ಏನಾದ್ರೂ ಬಿಟ್ಟು ಸಂಪಾದಿಸಿದ್ದರೆ ದಾಖಲೆ ನೀಡಲಿ. ಅವರ ಕುಟುಂಬದ ಜವಾಬ್ದಾರಿ ಕುಮಾರಸ್ವಾಮಿ ತಾನೇ. ದೇವೇಗೌಡರು ಹೆಚ್ಚು ಮಾತಾಡಲ್ಲ. ಕುಮಾರಸ್ವಾಮಿ ಅವರೇ ಎಲ್ಲಾ ವಿಚಾರದಲ್ಲೂ ಮಾತಾಡ್ತಾರೆ ಅಲ್ವಾ. ಈಗ ಬೇರೆ ಕುಮಾರಸ್ವಾಮಿ ತೊಡೆ ತಟ್ಟುತ್ತಾರೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಬಗ್ಗೆ ಲಘುವಾಗಿ ಮಾತನಾಡುವುದು ಕುಮಾರಸ್ವಾಮಿ ಕೆಲಸ. ದೊಡ್ಡ ಖಾತೆ ಕೊಟ್ಟಿದ್ದಾರೆ, ಅದನ್ನ ನಿಭಾಯಿಸಲಿ. ಬಿಡಿದಿಯಿಂದ ರಾಮನಗರದವರೆಗೂ ಡಿಕೆ ಶಿವಕುಮಾರ್ ಬೈಯ್ಯುತ್ತಾ ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.