ಬೆಂಗಳೂರು:- ಶ್ರೀರಾಮಚಂದ್ರನ ಮರ್ಯಾದೆಯನ್ನು ಬಿಜೆಪಿ ತೆಗೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಸಂಬಂಧ X ಮಾಡಿರುವ ಕಾಂಗ್ರೆಸ್, ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ ಎಂದು ವಾಗ್ದಾಳಿ ನಡೆಸಿದೆ.
ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ. ಆತನ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ. ಹೊಸ ಪ್ರತಿಭೆಯನ್ನು ಪರಿಚಯಿಸಲಿ ಎಂದು ಕುಟುಕಿದೆ.
ಕ್ರಿಮಿನಲ್ ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ ಎಂದು ಹರಿಹಾಯ್ದಿದೆ.
ಅಕ್ರಮ ಸಾರಾಯಿ ದಂಧೆಕೋರ, ಮಟ್ಕಾ, ಜೂಜುಕೋರನನ್ನು ರಾಮಭಕ್ತನೆಂದು ಹೇಳಿ ದೊಂಬಿ ಎಬ್ಬಿಸುತ್ತಿರುವ ಬಿಜೆಪಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಮರ್ಯಾದೆ ತೆಗೆಯುತ್ತಿದೆ. ಮಟ್ಕಾ, ಜೂಜು, ಅಕ್ರಮ ಹೆಂಡದ ದಂಧೆ ಮಾಡುವವರು ಶ್ರೀರಾಮನ ಭಕ್ತರಾಗಲು ಸಾಧ್ಯವೇ. ಬಿಜೆಪಿಗೆ ರಾಮನ ಬಗ್ಗೆ ಮಿನಿಮಮ್ ಪ್ರಜ್ಞೆ, ಗೌರವ ಇದ್ದಿದ್ದರೆ ರಾಮನ ಪಾವಿತ್ರ್ಯತೆಗೆ ದಕ್ಕೆ ತರುತ್ತಿರಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.