ಹುಬ್ಬಳ್ಳಿ: ಬಿಜೆಪಿಗೆ ರಾಜಕೀಯ ಬಟ್ಟರೆ ಬೇರೇನು ಬೇಕಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಗಳಂತಿರುವ ಸೊಸೆ ಮೇಲೆ ರೇಪ್ ಗೆ ಯತ್ನ: ಸ್ಪಂದಿಸದ ಮಗನ ಹೆಂಡ್ತಿಯನ್ನೇ ಕೊಲೆಗೈದ ಮಾವ!
ಈ ಸಂಬಂಧ ಮಾತನಾಡಿದ ಅವರು, ಬಿಜೆಪಿಯವರಿಗೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿಗೆ ರಾಜಕೀಯ ಬಟ್ಟರೆ ಬೇರೇನು ಬೇಕಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಅವರಲ್ಲಿ ಒಗ್ಗಟ್ಟು ಇಲ್ಲ, ಅದಕ್ಕೆ ಏನೇನೋ ಮಾಡುತ್ತಿದ್ದಾರೆ. ಅವರೇನೇ ಚರ್ಚೆ ಮಾಡಿದರೂ ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಮಹದಾಯಿ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ಜೋಶಿ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಯಾವಾಗ ಅನುಮತಿ ಕೊಡುತ್ತಾರೆ ಅಂತಾ ಕಾಯುತ್ತಿದ್ದೇವೆ. ಎಲ್ಲಾ ಪ್ಲ್ಯಾನ್ ಸಿದ್ಧವಿದೆ ಎಂದು ತಿಳಿಸಿದರು.