ಬೆಂಗಳೂರು: ಸಂಸತ್ತಿನಿಂದ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಈಗ ಸಂಸತ್ತಿನಲ್ಲಿ ಸಂಸದರನ್ನು ಅಮಾನತು ಮಾಡಿದ್ದಕ್ಕಿಂತ ಇದಕ್ಕೆ ಬೇರೆ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.
https://ainlivenews.com/do-you-know-the-benefits-of-coconut-oil-massage-in-winter/
ನೂರಾರು ಜನ ಸಂಸದರನ್ನು ಹೊರಗಡೆ ಇಟ್ಟು ಪ್ರಮುಖವಾದ ಮಸೂದೆಗಳನ್ನು ಪಾಸ್ ಮಾಡಿದ್ದಾರೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲು ಆಗುತ್ತದಾ? ಎಂದ ಅವರು, “ಯಾವ ಉದ್ದೇಶಕ್ಕಾಗಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿಕೊಂಡಿದ್ದು? ಪ್ರಜಾಪ್ರಭುತ್ವ ಎಂದರೆ ಪ್ರತಿಯೊಬ್ಬರು ನ್ಯಾಯ ಸಿಗಬೇಕು, ಸಮಾನತೆ ಸಿಗಬೇಕು. ಈ ದೇಶದಲ್ಲಿ ನಾನು ಒಬ್ಬ ಭಾರತೀಯ ಎಂದು ಬದುಕಬೇಕು ಎಂಬುದೇ ಪ್ರಜಾಪ್ರಭುತ್ವದ ಆಶಯ. ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ,” ಎಂದು ವಾಗ್ದಾಳಿ ನಡೆಸಿದರು.