ಬೆಂಗಳೂರು:- ವಕ್ಫ್ ನೋಟಿಸ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲು: ಕೋಚ್ ಗೌತಮ್ ಗಂಭೀರ್ ಮೇಲೆ ತೂಗುಗತ್ತಿ!
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಿಂದ ಹಿಡಿದು ಎಲ್ಲಾ ನಾಯಕರು ಆರಾಮವಾಗಿ ಇದ್ದಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯವರೆಲ್ಲಾ ತುಂಬಾ ಆರಾಮಾಗಿದ್ದಾರೆ. ಬಿಜೆಪಿ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಬಿಡುವಾಗಿದ್ದಾರೆ. ಮುಂದಿನ ಐದು ವರ್ಷ ಕೂಡ ಅವರು ಬಿಡುವಾಗಿ ಇರುತ್ತಾರೆ. ವಿಪಕ್ಷದಲ್ಲೇ ಕೂರುತ್ತಾರೆ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ವಕ್ಫ್ ವಿಚಾರವಾಗಿ ಸಿಎಂ ಸ್ಪಷ್ಟನೆ ನೀಡಿದ್ದಾರೆ. ನೋಟಿಸ್ ಕೊಡಲು ಕಾರಣ ಯಾರು ಅಂದರೆ ಅದು ಬಿಜೆಪಿ ಅವರೇ. ಮಗು ಚಿವುಟೋದು ಅವರೇ, ತೊಟ್ಟಿಲು ತೂಗೋದು ಅವರೇ. ಅವರಿಂದಲೇ ನೋಟಿಸ್ ಕೊಟ್ಟಿದ್ದು ಅಲ್ವಾ. ಅದನ್ನು ಈಗ ನಾವು ನಿಲ್ಲಿಸುತ್ತಿದ್ದೇವೆ. ನಾವು ರೈತರ ಪರವಾಗಿ ಇದ್ದೇವೆ ಎಂದು ಕಿಡಿಕಾರಿದರು.