ತುಮಕೂರು: ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಚಿವ ಕೆಎನ್ ರಾಜಣ್ಣ ಅಯೋಧ್ಯೆ ರಾಮಲಲ್ಲಾ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೌದು ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ.
Recruitment: ನಿಮ್ಹಾನ್ಸ್’ನಲ್ಲಿ ಕೆಲಸ ಖಾಲಿ ಇದೆ..! ತಿಂಗಳಿಗೆ ₹ 90,000 ಸಂಬಳ – ಇಂದೇ ಕೊನೆ ದಿನಾಂಕ
ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಹೇಳಿದ್ದಾರೆ. ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಅನೇಕ ರಾಮ ದೇಗುಲಗಳಿವೆ. ಆದರೆ, ಬಿಜೆಪಿ ಚುನಾವಣೆಗಾಗಿ ದೇಗುಲ ಕಟ್ಟುತ್ತಿದೆ. ಬಿಜೆಪಿ ಜನರನ್ನು ಮೋಸ ಮಾಡುತ್ತಿದೆ ಎಂದು ರಾಜಣ್ಣ ಟೀಕಿಸಿದ್ದಾರೆ. ರಾಜಣ್ಣ ಹೇಳಿಕೆಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.