ಬೆಂಗಳೂರು: ಕಾಂಗ್ರೆಸ್ ಪಕ್ಷದವರಿಗೆ ನಕಲಿ ಗಾಂಧಿ ಗಳು ಅಂತ ಬಿಜೆಪಿಯವರು ಹೇಳ್ತಾರೆ ಇವರಿಗೆ ನಿಜವಾದ ಗಾಂಧಿ ಮೇಲೆ ಗೌರವ ಇದ್ರೆ ನಾಥುರಾಂ ಗೋಡ್ಸೆಯನ್ನು ಮೊದಲ ಭಯೋತ್ಪಾದಕ ಅಂತ ಘೋಷಣೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸವಾಲ್ ಹಾಕಿದರು.
ಬೆಂಗಳೂರಲ್ಲಿ ಇಂದು ಮಾತನಾಡಿದ ಅವರು, ನಕಲಿ ದೇಶಭಕ್ತರು ಇವರೆಲ್ಲ ಯಾವುದೇ ಒಬ್ಬ ಸಂಘಪರಿವಾರದವನು ಸ್ವಾತಂತ್ರ್ಯ ಹೋರಾಟಕ್ಕೆ ಪಾಲ್ಗೊ಼ಂಡಿಲ್ಲ ಪ್ರಹ್ಲಾದ ಜೋಷಿ ಇಂಡಿಯಾ ಗೇಟ್ ಗೆ ಹೋಗಿ ನೋಡಲಿ ವಯಸ್ಸಾಯ್ತು ಈಗ 57 ಸಾವಿರ ಹುತಾತ್ಮರ ಹೆಸರಿನಲ್ಲಿ 37 ಸಾವಿರ ಮಂದಿ ಅಲ್ಪಸಂಖ್ಯಾತರ ಹೆಸರೇ ಇದೆ ಅಲ್ಲಿ17 ಸಾವಿರ ಹಿಂದೂಗಳ ಹೆಸರಿದೆ ನಕಲಿ ದೇಶಭಕ್ತರು ಬೇರೆಯವರ ಬಗ್ಗೆ ಮಾತಾಡೋದು ಬೇಡ ಮೊದಲು ಜೋಷಿ ಯವರು ಕೇಂದ್ರದ ಸಚಿವರಾಗಿ ಮಹದಾಯಿ ಸಮಸ್ಯೆ ಬಗೆಹರಿಸಲು ಸಾಧ್ಯ ಆಗ್ತಿಲ್ಲ ಇವರ ಕೈಲಿ ಸುಳ್ಳುಗಳನ್ನು ಹಬ್ಬಿಸಿ ಓಟು ಪಡೆಯಲು ಯತ್ನಿಸಿದರು ಎಂದರು.
ಹಾಗೆ ಹುಬ್ಬಳ್ಳಿ ಯಲ್ಲಿ ಯಾವುದಾದರೂ ಒಂದು ಮಲ್ಟಿ ನ್ಯಾಷನಲ್ ಕಂಪನಿ ಬಂದಿದೆಯಾ? ಜೋಷಿಯವರು ಯಾವುದಾದರೂ ಒಂದು ಕಾರ್ಪೋರೇಟ್ ಸೆಕ್ಟರ್ ತಂದಿದ್ದಾರಾ ಹುಬ್ಬಳ್ಳಿ ಧಾರವಾಡಕ್ಕೆ ಕಿತ್ತೂರು ಚೆನ್ನಮ್ಮನ ಉತ್ಸವ ಕೂಡ ಮಾಡೋದಕ್ಕೆ ಇವರ ಕೈಲಿ ಸಾಧ್ಯ ಆಗಿಲ್ಲದೇಶದ ಯೋಗ್ಯತೆ ಪಂಚಾಂಗದಿಂದ ನಡೆಯುತ್ತದೆ ಅಂತ ಜೋಷಿ ಭಾವಿಸಿದ್ದಾರೆ ಸಂವಿಧಾನ ಬಂದಿದೆ ಪಂಚಾಂಗ ನಡೆಯೋದಿಲ್ಲ ಎಂಬುದನ್ನು ಜೋಷಿ ತಿಳಿದುಕೊಳ್ಳಲಿ ಡೋಂಗಿ ಆದಿತ್ಯನಾಥ ಪ್ರಕರಣ ಹೇಗೆ ವಾಪಸ್ ತೆಗೆದುಕೊಂಡರು ಉತ್ತರ ನೀಡಲಿ ಎಂದರು.