ಹಾವೇರಿ:- ರಾಜ್ಯದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ,
ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕದ ಬಗ್ಗೆ ಒಂದು ದಿನವಾದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದಾರಾ? ಚುನಾವಣೆ ಸಂದರ್ಭದಲ್ಲಿ ಮಹದಾಯಿ ಬಗ್ಗೆ ಬಹಳ ಕೂಗಾಡಿದರು. ಕೊನೆಗೆ ಏನಾದರೂ ನೀರು ಬಿಟ್ಟಿದ್ದಾರಾ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿ ಬಹಳಷ್ಟು ನಾಯಕರು ಈಗಾಗಲೇ ಮಾರ್ಗದರ್ಶನ ಮಂಡಳಿಗೆ ಹೋಗುತ್ತಿದ್ದಾರೆ. ಉದಾಸಿ, ನಾರಾಯಣಸ್ವಾಮಿ, ಡಿವಿಎಸ್ ಚುನಾವಣೆ ನಿಲ್ಲಲ್ಲ ಅಂದಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿ ಆಗಲು ಸಚಿವ ಪ್ರಲ್ಹಾದ್ ಜೋಶಿ ಶತಪ್ರಯತ್ನ ಮಾಡಿದ್ದರು. ಬಿಜೆಪಿ ಹೀನಾಯ ಸ್ಥಿತಿಗೆ ತರಲು ಕಾರಣ ಯಾರೆಂದು ಅವರನ್ನೇ ಕೇಳಿ. ಯಾವುದೋ ಸಂತೋಷದ ಗುಂಪಿನ ಜೊತೆಗೆ ಸೇರಿಕೊಂಡಿದ್ದರು. ಅದರಿಂದಲೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ ಎಂದು ವಾಗ್ದಾಳಿ ಮಾಡಿದ್ದಾರೆ.