ಬೆಂಗಳೂರು: ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ. ರಾಜ್ಯಾಧ್ಯಕ್ಷರ ಚುನಾವಣೆಗೆ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ವಿದ್ಯಮಾನಗಳ ಬಗ್ಗೆ ನಾವು ಹೈಕಮಾಂಡ್ ಮಾಹಿತಿ ಕೊಟ್ಡಿದ್ದೇವೆ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯಲ್ಲ. ರಾಜ್ಯಾಧ್ಯಕ್ಷರ ಚುನಾವಣೆಗೆ ನಾವು ಸ್ಪರ್ಧೆ ಮಾಡುತ್ತೇವೆ ಎಂದರು. ಚುನಾವಣೆ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಬರೋ ದಿನ ಇನ್ನು ಅಂತಿಮ ಆಗಿಲ್ಲ. ಚುನಾವಣೆ ವೇಳಾಪಟ್ಟಿ ಸಿದ್ಧವಾಗಬೇಕು.
ದೆಹಲಿ ಚುನಾವಣೆ ಆದ ಮೇಲೆ ವರಿಷ್ಠರು ನಮ್ಮ ಜೊತೆ ಮಾತಾಡೋದಾಗಿ ಹೇಳಿದ್ದಾರೆ. ಕರ್ನಾಟಕಕ್ಕೆ ನೂರಕ್ಕೆ ನೂರು ಬದಲಾವಣೆ ಆಗೇ ಆಗುತ್ತದೆ. ಚುನಾವಣೆ ನಡೆಯುವ ಸನ್ನಿವೇಶ ಬಂದರೆ ನಾಮಪತ್ರ ಸಲ್ಲಿಕೆ ಮಾಡೋ ಅವಶ್ಯಕತೆ ಬಂದರೆ ನಾವು ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದರು.
ನಿಮಗೆ ಗೊತ್ತೆ..? ಈ ವ್ಯಾಯಾಮಗಳನ್ನ ಮಾಡಿದ್ರೆ ಸಾಕು ಶುಗರ್ ಕಂಟ್ರೋಲ್ಗೆ ಬರುತ್ತಂತೆ..!
ಯತ್ನಾಳ್ ಬಣದಿಂದ ಸ್ಪರ್ಧೆ ಮಾಡಲ್ಲ ಅಂತ ಸುದ್ದಿ ಬಂದಿರೋದು ನಮಗೆ ಗೊತ್ತಿಲ್ಲ. ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿದಿಲ್ಲ. ಚುನಾವಣೆ ಅಂತ ವರಿಷ್ಠರು ನಿರ್ಧಾರ ಮಾಡಿದ್ರೆ ನಾವು ನಾಮಪತ್ರ ಹಾಕುತ್ತೇವೆ. ಯತ್ನಾಳ್ಗೆ ನೋಟಿಸ್ ರಾಜಕೀಯವಾಗಿ ಕೊಟ್ಟಿಲ್ಲ.
ಯತ್ನಾಳ್ ನೋಟಿಸ್ಗೆ ಉತ್ತರ ಕೊಟ್ಟಿದ್ದಾರೆ. ನಾವು ಯತ್ನಾಳ್ ಜೊತೆ ಇದ್ದೇವೆ. ಹೈಕಮಾಂಡ್ ನೋಟಿಸ್ನಿಂದ ನಾವು ಯಾರೂ ವಿಚಲಿತ ಆಗಿಲ್ಲ. ಚುನಾವಣೆ ಆಗೋವರೆಗೂ ನಮ್ಮ ವಾದ ಇದ್ದೇ ಇರುತ್ತದೆ. ನಮ್ಮ ವಾದ ತಿಳಿಸೋಕೆ ಮಾತಾಡೋದು ನಮಗೆ ಇರೋ ಮಾರ್ಗ. ರಾಜ್ಯಾಧ್ಯಕ್ಷರ ಬದಲಾವಣೆ ಬೇಕು ಅಂತ 100 ಕ್ಕೆ 90% ಜನ ಇದ್ದಾರೆ. ಸಂಘ ಮತ್ತು ಹೈಕಮಾಂಡ್ ಸರಿಯಾದ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.