ಬೆಳಗಾವಿ: ಅಂಬೇಡ್ಕರ್ ಅವರನ್ನು ಕಾಂಗ್ರೆಸ್ʼನವರು ಮಹಾರಾಷ್ಟ್ರದಲ್ಲಿ 2 ಬಾರಿ ಸೋಲಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಸಲುವಾಗಿ ಅಮಿತ್ ಶಾ ಅವರ ಬಗ್ಗೆ ಕಾಂಗ್ರೆಸ್ ಅವರು ಇಲ್ಲಸಲ್ಲದ ಆರೋಪ, ಟೀಕೆಗಳನ್ನು ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ನವರು ಮಹಾರಾಷ್ಟ್ರದಲ್ಲಿ 2 ಬಾರಿ ಸೋಲಿಸಿದ್ದಾರೆ. ಸ್ವತಃ ನೆಹರೂ ಅವರೇ ಬಂದು ಅಂಬೇಡ್ಕರ್ ಅವರನ್ನು ಸೋಲಿಸುವಂತೆ ಪ್ರಚಾರ ಮಾಡಿರುವುದನ್ನು ನಾವು ನೋಡಿದ್ದೀವಿ ಎಂದರು.
ಅಪ್ಪಿತಪ್ಪಿಯೂ ಈ ಆಹಾರಗಳ ಜೊತೆ ಬಾಳೆಹಣ್ಣು ತಿನ್ನಬೇಡಿ: ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್!
ಇನ್ನೂ ಅಂಬೇಡ್ಕರ್ ಅವರಿಗೆ ಅಗೌರವ ತೋರಿರೋದು ಕಾಂಗ್ರೆಸ್ನವರು. ಅವರ ಸ್ಮಾರಕಗಳನ್ನು ಅಭಿವೃದ್ಧಿ ಮಾಡಿ ವಿಶ್ವಕ್ಕೆ ತಿಳಿಸಿಕೊಟ್ಟದ್ದು ನರೇಂದ್ರ ಮೋದಿ ಅವರು. ಇವತ್ತು ಅಮಿತ್ ಶಾ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮುಖಾಂತರ ಒಂದು ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಸದಾ ಗೌರವವನ್ನು ಇಟ್ಟುಕೊಂಡಿದೆ ಎಂದರು.