ಹರಿಯಾಣ: ಇಲ್ಲಿನ ಎಷ್ಟೋ ಯುವಜನರು ಅಮೆರಿಕಕ್ಕೆ ವಲಸೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬಿಜೆಪಿ ಸರ್ಕಾರದ ಆಡಳಿತ, ನಿರುದ್ಯೋಗ ಸಮಸ್ಯೆ ಸೃಷ್ಟಿಸಿರುವುದೇ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದರು. ಅ.5ರಂದು ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಕರ್ನಾಲ್ನ ಅಸ್ಸಾಂದ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಗಾ,
Ghee Test: ನೀವು ಖರೀದಿಸುವ ತುಪ್ಪ ಅಸಲಿಯೋ, ನಕಲಿಯೋ..? ಹೀಗೆ ಪರೀಕ್ಷಿಸಿ ನೋಡಿ
ನಿರುದ್ಯೋಗ ಸಮಸ್ಯೆಗಳ ಕುರಿತು ಮಾತನಾಡುತ್ತಾ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಹರಿಯಾಣ ಯುವಕರು ಏಕೆ ಅಮೆರಿಕ್ಕೆ ಹೋಗುತ್ತಿದ್ದಾರೆ ಗೊತ್ತೇ? ಎಂದು ಪ್ರಶ್ನೆ ಮಾಡಿದರು. ಇತ್ತೀಚೆಗೆ ನಾನು ಯುಎಸ್ನ ಡಲ್ಲಾಸ್ಗೆ ಭೇಟಿ ನೀಡಿದ್ದೆ. ಅಲ್ಲಿ ಹರಿಯಾಣದಿಂದ ವಲಸೆ ಹೋಗಿದ್ದ ಹಲವಾರು ಯುವಕರನ್ನು ಭೇಟಿಯಾದೆ. ಅವರ ವಲಸೆಗೆ ಬಿಜೆಪಿ ಸರ್ಕಾರದ ಆಡಳಿತವೇ ಕಾರಣ ಎಂದು ದೂರಿದರು.