ಗದಗ:- ಕಾಂಗ್ರೆಸ್ ಸ್ಲೀಪಿಂಗ್ ಸರ್ಕಾರ ಎಂಬ ಬಿಜೆಪಿ ಎಕ್ಸ್ ಪೋಸ್ಟ್ ವಿಚಾರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಗದಗನಲ್ಲಿ ಮಾತನಾಡಿದ ಅವರು, ಮಲಗಿ ನಿದ್ದೆ ಹತ್ತಿದಾಗ ಟ್ವೀಟ್ ಮಾಡಿದ್ದಾರಾ.. ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ಕುಟುಂಬವನ್ನ ಬಡತನ ರೇಖೆಯಿಂದ ಮೇಲೆತ್ತುತ್ತಿದ್ದೇವೆ.. ನಾಲ್ಕುವರೆ ಕೋಟಿ ಜನರನ್ನ ಬಡತನ ಮುಕ್ತರನ್ನಾಗಿಸುತ್ತಿದ್ದೇವೆ..
ಇದು ಕ್ರಾಂತಿಕಾರಕ ಅಂತಾ ಅನ್ಸಲ್ವಾ..? ಇದು ಏನೂ ಅಲ್ವಾ.. ಕೇಳುವವರು ಯಾರು..? ಸ್ವಾತಂತ್ರ್ಯ ನಂತರ ಅರ್ಹಫಲಾನುಭವಿಗಳಿಗೆ 95 ರಿಂದ 99 ಪ್ರತಿಶತ ಸಿಗಬೇಕಾದ ಸವಲತ್ತು ಸಿಕಿತ್ತಾ..? ಕ್ರಾಂತಿಕಾರಕ ಬೆಳವಣಿಗೆ ತಂದ ಆಡಳಿತಕ್ಕೆ ಮಲಗಿದ್ದಾರೆ ಅಂತಾರೆ ಅಂದ್ರೆ ಇವರಿಗೆ ಏನ್ ಹೇಳ್ಬೇಕು. ಅವರು ಏಳಲಿ.. ಕನಸಿನಿಂದ ನಿದ್ದೆಯಿಂದ ಏಳಲಿ, ಸರ್ಕಾರದ ಕೆಲಸ ಅರ್ಥ ಮಾಡಿಕೊಳ್ಳಲಿ..
ಸಿದ್ದರಾಮಯ್ಯ ಹೋದಲ್ಲೆಲ್ಲ ಮಹಿಳೆಯರು ಯಾಕೆ ಆದರದಿಂದ ಗೌರವಿಸುತ್ತಾರೆ. ನೀವು ಸರ್ಕಾರದ ಕಾರ್ಯವೈಖರಿ ನೋಡಿದ್ದೀರಿ.. ಎಲ್ಲ ಜಿಲ್ಲೆಯಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೀತಿದೆ. ವೀಡಿಯೋ, ಫೋಟೋಕ್ಕಾಗಿ ಜನತಾ ದರ್ಶನ ಮಾಡಿಲ್ಲ. ಅರ್ಜಿಗಳನ್ನ ಲಾಜಿಕಲ್ ಎಂಡಿಗೆ ಮುಟ್ಟಿಸಿದ್ದೇವೆ.. ಜನತಾ ದರ್ಶನದ ರಿಪೋರ್ಟ್ ಕೊಟ್ಟಿದ್ದೇವೆ. ಸ್ವಾತಂತ್ರದ ನಂತರ ಹತ್ತಾರು ಜನತಾ ದರ್ಶನ ನಡೆದಿವೆ.. ಯಾರಾದ್ರೂ ರಿಪೋರ್ಟ್ ಕೊಟ್ಟಿದ್ದಾರಾ..
ಮಧ್ಯತರ ರಿಪೋರ್ಟ್ ಕೊಟ್ಟಿದ್ದೇವೆ.. ಕೆಲಸ ಆಗದವರನ್ನ ಕರೆದು ಮೀಟಿಂಗ್ ಮಾಡಿದ್ದೇವೆ. ಉತ್ತಮ ಜನ ಸೇವೆ ಮಾಡ್ಬೇಕು ಅಂತಾ ಕೆಲಸ ಮಾಡ್ತಿದ್ದೇವೆ. ನಮ್ಮವ ಕೆಲಸದಿಂದ ಅಸೂಯೆ ಪಡುತ್ತಿದ್ದಾರೆ.. ಅತಾಶರಾಗಿದ್ದಾರೆ. ಬಿಜೆಪಿಗೆ ರಾಮಮಂದಿರ ಒಂದೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ.ಸರಕಾರದ ಸಾಧನೆಯನ್ನ ವಿವೇಕದಿಂದ ನೋಡ್ತಾರೆ ಅವರಿಗೆ ಕಾಣುತ್ತೆ..
ರಾಮಮಂದಿರ ಅಪೂರ್ಣ ಅಂತಾ ನಾನು ಹೇಳೋದಲ್ಲ.. ಶಂಕರಾಚಾರ್ಯರು ಹೇಳುತ್ತಾರೆ.. ಧರ್ಮದಲ್ಲಿ ನಿಷ್ಠೆ ಇರುವವರು ಶಂಕರಾಚಾರ್ಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತೇವೆ. ಶಂಕರಾಚಾರ್ಯರು ಹೇಳೋದನ್ನ ನಂಬುತ್ತೇವೆ ಹೊರತು ಬಿಜೆಪಿ ಅಧ್ಯಕ್ಷ ಹೇಳೋದನ್ನ ನಂಬಬೇಕಾ.. ದೇಶದಲ್ಲಿ ರಾಜಕೀಯ ವ್ಯಕ್ತಿಗಳು ಧರ್ಮವನ್ನ ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಅನ್ನೋದನ್ನ ಶಂಕರಾಚಾರ್ಯರು ಮಾರ್ಗದರ್ಶನ ಮೂಲಕ ತಿಳಿಸಿದ್ದಾರೆ..
ರಾಜಕೀಯವಾಗಿ ಧರ್ಮ ಹೇಗೆ ಬಳಕೆಯಾಗುತ್ತೆ ಅನ್ನೋದನ್ನ ತಿಳಿಯಲು ಇದು ಪರ್ವಕಾಲ. ಶಂಕರಾಚಾರ್ಯರೇ ಹೋಗಲ್ಲ.. ಯಾರು ಅತ್ಯಂತ ಎತ್ತರದವರು ಅಂತಾ ಪರಿಗಣಿಸುತ್ತೇವೋ ಅವರೇ ಹೋಗ್ತಿಲ್ಲ ಎಂದು ನಾಲ್ಕು ಮಠಗಳ ಪೈಕಿ ಇಬ್ಬರು ಸ್ವಾಮೀಜಿಗಳು ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ..