ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದವರು ಎಲ್ಲ ವರ್ಗದವರಿಗೆ ಮೀಸಲಾತಿ ಕೊಡಲಾಗುವುದು ಎಂದು ಹೇಳಿ ಚಾಕಲೇಟ್ ಹಂಚಿಕೆ ಮಾಡಿದ ಹಾಗೇ ಬಿಜೆಪಿಯವರು ಮಾಡಿ ಹೋದರು ಎಂದುಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ಗಂಭೀರ ಸ್ವರೂಪದ ಆರೋಪ ಮಾಡಿದರು. ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಡಾ.ಸದಾಶಿವ ಆಯೋಗ ಜಾರಿ ವಿಚಾರ ಕುರಿತು ಮಾತನಾಡಿದ ಅವರುಡಾ. ಸದಾಶಿವ ಆಯೋಗ ವರದಿ ಜಾರಿ ಮಾಡುವುದು ನಮ್ಮ ಆದ್ಯ ಕರ್ತವ್ಯಡಾ.ಸದಾಶಿವ ವರದಿ ಜಾರಿ ಮಾಡುವುದು 2-3 ದಶಕಗಳ ಕಾಲದ್ದು ಈಗಿನದು ಅಲ್ಲಾ.
ಭಾರತೀಯ ಜನತಾ ಪಕ್ಷದವರು ಡಾ. ಸದಾಶಿವ ಆಯೋಗ ವರದಿ ತಿರಸ್ಕಾರ ಮಾಡಿದ್ದಾರೆ ಅವರು ಮೀಸಲಾತಿ ವಿಚಾರದಲ್ಲಿ ಕಾಟಾಚಾರಕ್ಕೆ ಮೀಸಲಾತಿ ಜಾರಿ ಮಾಡಿದ್ದಾರೆ ನಾವು ಚುನಾವಣಾ ಸಂದರ್ಭದಲ್ಲಿ ಮಾತು ಕೊಟ್ಟಿದ್ದೇವೆ ಈ ಕುರಿತುಚಿತ್ರದುರ್ಗದ ಸಮಾವೇಶದಲ್ಲಿ ಡಾ.ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿ ಮಾಡುತ್ತೇವೆ ಅಂತಾ ಮಾತುಕೊಟ್ಟಿದ್ದೇವು. ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ ಅಂತಾ ಹೇಳಿದ್ದವು.
ಮೀಸಲಾತಿ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಏಳು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಆಗಿದ್ದು ಮೀಸಲಾತಿ ಜಾರಿ ವಿಚಾರದಲ್ಲಿ ಕಾನೂನು ಸಲಹೆ ಅಗತ್ಯವಾಗಿದ್ದುಕಾನೂನು,ಸಂವಿಧಾನದ ವ್ಯಾಪ್ತಿಯಲ್ಲಿ ಚರ್ಚೆ ಆಗಬೇಕು ಈ ಕುರಿತುಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ಕಾನೂನು ತಜ್ಞರು ಹಿರಿಯರ ಜೊತೆಗೆ ಚರ್ಚೆ ಮಾಡಬೇಕಾಗಿದೆಯಾವುದೇ ರೀತಿಯ ಕಾನೆ ತೊಡಕುಗಳು ಆಗದಂತೆ ನೋಡಿಕೊಳ್ಳಬೇಕು
ಕಾನೂನು, ಸಂವಿಧಾನ ಇದ್ದು ನಾವು ಮಾತು ಕೊಟ್ಡಿದ್ದೇವೆಕಾಂಗ್ರೆಸ್ ಈ ಕುರಿತು ಓಪನ್ ಮೈಂಡ್ ಇದೆ ಯಾವುದೇ ರೀತಿಯ ಅನುಮಾನ ಬೇಡಾ ಸದಾಶಿವ ಆಯೋಗ ವರದಿಜಾರಿ ಮಾಡಿಯೇ ಮಾಡುತ್ತೀವೆ. ಡಾ. ಸದಾಶಿವ ಆಯೋಗ ಜಾರಿಯಲ್ಲಿ ಶಾಸಕರ ಮನೆ ಮುಂದೆ ಒತ್ತಾಯ ಮಾಡಿ ಪ್ರತಿಭಟನೆಗೆ ಸಚಿವ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮುನಿಯಪ್ಪನವರು ನಮ್ಮ ಹಿರಿಯ ನಾಯಕರು ಅವರು,
ಯಾವ ಆಧಾರದ ಮೇಲೆ ಹಾಗೂ ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಗೊತಿಲ್ಲ ನೋಡೋಣ ಆ ಕುರಿತು ಮಾತನಾಡುವೆ ಎಂದರು. ಇನ್ನು ಆಪರೇಷನ್ ಹಸ್ತಕ್ಕೆ ಹೆದರಿ ಜಾತ್ಯಾತೀತ ಜನತಾದಳ ಶಾಸಕರ ರೆಸಾರ್ಟ್ ನಲ್ಲಿ ಸಭೆ ವಿಚಾರ ಕುರಿತು ಸಹ ಮಾತನಾಡಿದ ಅವರು, ಅವರು ಸಭೆ ಮಾಡುವುದು ಹೊಸದನಾ, ಮಾಡಲಿ ಬಿಡಿ ಸಚಿವ ಸ್ಥಾನದ ಆಕಾಂಕ್ಷೆಗಳಿಂದ ಅಧಿಕಾರ ಹಂಚಿಕೆ ವಿಚಾರ ಈ ಕುರಿತು ಯಾರು ಏನು ಮಾತಾಡಲಿಕ್ಕೆ ಆಗಲ್ಲಇದಕ್ಕೆ ಹೈಕಮಾಂಡ್ ಮಾತ್ರ ಉತ್ತರ ಕೊಡಬೇಕು ಅಷ್ಟೇ ಎಂದರು.