ಬೆಂಗಳೂರು: ಬಿಜೆಪಿಯ ಆಂತರಿಕ ಭಿನ್ನಮತ ಹಾದಿ ಬೀದಿ ಜಗಳವಾಗಿದೆ, ಹೋದಲ್ಲಿ ಬಂದಲ್ಲಿ ವಿಜಯೇಂದ್ರ vs ಯತ್ನಾಳ್ ಬಣಗಳು ಕಚ್ಚಾಡ್ತಿವೆ. ಈ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಕೊನೆಗೂ ಮುಂದಾಗಿದ್ದು ಇದರ ಮೊದಲ ಭಾಗವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಶಾಸಕರು, ಸಂಸದರ ಸಭೆ ನಡೆಸಿದ್ರು. ಕೇಂದ್ರ ಕಛೇರಿಯಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ ನಡೆಯಿತು..
ಇನ್ನೂ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಫುಲ್ ಗರಂ ಆಗಿ, ಸಾಲು ಸಾಲು ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೋರ್ ಕಮಿಟಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬದನೇಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ!
ಅದರಲ್ಲೂ ಸಿ.ಟಿ. ರವಿ ವಿರುದ್ಧ ರಾಧಾಮೋಹನ್ ದಾಸ್ ಫುಲ್ ಗರಂ ಆಗಿದ್ದರು ಎಂದು ತಿಳಿದು ಬಂದಿದೆ. ನೀವು ವಿಧಾನಸಭೆಯಲ್ಲಿ ಸೋತಿದ್ದೀರಿ. ನಿಮ್ಮನ್ನು ಕರೆದುಕೊಂಡು ಬಂದು ಎಂಎಲ್ಸಿ ಮಾಡಿದ್ದೇವೆ. ಇತ್ತೀಚೆಗೆ ಮುಂದಿನ ಪ್ರಧಾನ ಮಂತ್ರಿ ಯೋಗಿ ಆದಿತ್ಯನಾಥ್ ಆಗಬೇಕು ಎಂದು ಹೇಳಿಕೆ ಕೊಟ್ಟಿದ್ದೀರಿ. ದೇಶದಲ್ಲಿ ಪ್ರದಾನಮಂತ್ರಿಗಳ ಖುರ್ಚಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ದೇಶಕ್ಕೆ ಏಕೆ, ಇಡೀ ಪ್ರಪಂಚಕ್ಕೆ ಪ್ರಧಾನಿ ಮೋದಿ ಅವರ ಜನಪ್ರಿಯತೆ ತಿಳಿದಿದೆ. ಹೀಗಿರುವಾಗ ನೀವೋಬ್ಬ ಬಿಜೆಪಿ ಸಂಘಟನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದವರಾಗಿ ಏನು ಹೇಳಬೇಕು? ಏನು ಹೇಳಬಾರದು? ಎಂಬುದು ಗೊತ್ತಿರಬೇಕು ಅಲ್ಲವೇ ಎಂದು ರಾಧಾಮೋಹನ್ ದಾಸ್ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.
ನೀವು ಮಾಧ್ಯಮಗಳ ಮುಂದೆ ಮಾತನಾಡುವುದನ್ನು ಕಡಿಮೆ ಮಾಡಿ. ನರೇಂದ್ರ ಮೋದಿಯವರ ಜನಪ್ರಿಯತೆ ಏನು? ಯೋಗಿ ಆದಿತ್ಯನಾಥರ ಜನಪ್ರಿಯತೆ ಏನು? ಎಂಬುದರ ಅರಿವು ನಿಮಗೆ ಬರುವುದಿಲ್ಲ ಎಂದರೆ ಹೇಗೆ ಎಂದು ಸಿ.ಟಿ.ರವಿಯವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.