ನವದೆಹಲಿ:- ಬಿಜೆಪಿಯು ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲು ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ನ ಗ್ಯಾರಂಟಿಗಳನ್ನು ನಕಲು ಮಾಡಿ, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು. ಬಿಜೆಪಿಗೆ ಯಾವುದೇ ಉದ್ದೇಶಗಳು ಹಾಗೂ ನೀತಿಗಳಿಲ್ಲ. ಕಾಂಗ್ರೆಸ್ ಸಾರ್ವಜನಿಕರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ಬಲವಾದ ಕಾರ್ಯಕ್ರಮಗಳನ್ನು ನೀಡಿದೆ’ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಾಗೂ ಬಿಜೆಪಿಯು ಹಲವು ಪ್ರಯತ್ನಗಳನ್ನು ನಡೆಸಿದ ನಂತರ, ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ನಕಲು ಮಾಡುವುದು ಉತ್ತಮ ಎಂದು ಭಾವಿಸಿದೆ. ಅಲ್ಲದೆ, ಚುನಾವಣೆಯ ಮೊದಲು ಬಿಜೆಪಿ ತನ್ನ ಕಾರ್ಯಸೂಚಿಗಳನ್ನು ಅವಸರದಲ್ಲಿ ಪೂರೈಸುವ ವಿಫಲ ಪ್ರಯತ್ನಗಳನ್ನು ಮಾಡಿದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
‘ರಾಜ್ಯದಲ್ಲಿ ಜನರಿಗಾಗಿ ಕಾಂಗ್ರೆಸ್ ಕೆಲಸ ಮಾಡಿದೆ ಮತ್ತು ನೀಡಿರುವ ಏಳು ಗ್ಯಾರಂಟಿಗಳನ್ನು ಪಕ್ಷ ಈಡೇರಿಸುತ್ತದೆ ಎಂದು ರಾಜಸ್ಥಾನದ ಜನರಿಗೆ ತಿಳಿದಿದೆ’ ಎಂದು ಖರ್ಗೆ ತಿಳಿಸಿದ್ದಾರೆ.