ಬೆಂಗಳೂರು:- ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು, ಕೇವಲ ರಾಜ್ಯದ ಲೂಟಿ. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಕಿಡಿಕಾರಿದೆ.
ಮದುವೆ ಆಗದ ಗಂಡ್ಮಕ್ಳೇ ಹುಷಾರ್ ಕಣ್ರಪ್ಪ: ವಂಚನೆ ಜಾಲದ ಬಗ್ಗೆ ಇರಲಿ ಎಚ್ಚರ!
ಈ ಬಗ್ಗೆ x ಮಾಡಿರುವ ಕಾಂಗ್ರೆಸ್, ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ರಾಜ್ಯದ ಲೂಟಿ, ಈಗ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ, ತಮ್ಮ ಅವಧಿಯ ಅಕ್ರಮ, ಅನಾಚಾರಗಳು ಬೆತ್ತಲಾಗುತ್ತವೆ ಎಂಬ ಆತಂಕದಲ್ಲಿ ವೈಯಕ್ತಿಕವಾಗಿ ಕಾಂಗ್ರೆಸ್ ನಾಯಕರ, ಸಚಿವರ ತೇಜೋವಧೆಗೆ ಇಳಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳ ವಿರುದ್ಧ ವಿಷ ಕಾರುತ್ತಿದೆ. ಭ್ರಷ್ಟಾಚಾರದ ಪಿತಾಮಹರಾದ ಬಿಜೆಪಿ ನಾಯಕರು ಅವರ ಘನ ಕಾರ್ಯಗಳ ಬಗ್ಗೆ ಕೇಳಿದರೆ ಮಾತ್ರ ಬೆನ್ನು ತಿರುಗಿಸಿ ಓಡುತ್ತಾರೆ ಎಂದು ವಾಗ್ದಾಳಿ ಮಾಡಲಾಗಿದೆ.
ಹೆಣದ ಮೇಲೆ ಹಣ ಲೂಟಿ ಮಾಡಿದ ಸಾವಿರಾರು ಕೋಟಿ ಕೋವಿಡ್ ಹಗರಣ
ನೂರಾರು ಕೋಟಿ ರೂ. ಕೊಳ್ಳೆ ಹೊಡೆದ ಪಿಎಸ್ಐ ನೇಮಕಾತಿ ಅಕ್ರಮ
ಬೋವಿ ನಿಗಮದಲ್ಲಿ 87 ಕೋಟಿ ರೂ ಹಗರಣ
ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ನಲ್ಲಿ 50 ಕೋಟಿಗೂ ಹೆಚ್ಚು ಅಕ್ರಮ
ಗಂಗಾ ಕಲ್ಯಾಣದಲ್ಲಿ ಯೋಜನೆಯಲ್ಲಿ 430 ಕೋಟಿಗೂ ಹೆಚ್ಚು ಅಕ್ರಮ
ಗಂಗಾ ಕಲ್ಯಾಣದಲ್ಲಿ ಯೋಜನೆಯಲ್ಲಿ 430 ಕೋಟಿಗೂ ಹೆಚ್ಚು ಅಕ್ರಮ
ಕಿಯೋನಿಕ್ಸ್ ನಲ್ಲಿ 400 ಕೋಟಿ ರೂ. ಹಗರಣ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ
ಬಿಟ್ ಕಾಯಿನ್ ಹಗರಣ
ಮೊಟ್ಟೆ, ಚಿಕ್ಕಿ, ಸ್ವೆಟರ್ ಹಗರಣ
KSDL ಹಗರಣ. ಪಟ್ಟಿ ದೊಡ್ಡದಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ!
ಇನ್ನು ಪ್ರಧಾನಿ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದ ಪ್ರಗತಿ ನಿಂತ ನೀರಾಗಿದೆ. ಪ್ರತಿಗಾಮಿ ನೀತಿಗಳು ದೇಶದ ಅರ್ಥ ವ್ಯವಸ್ಥೆ ತಲೆಕೆಳಗಾಗುವಂತೆ ಮಾಡುತ್ತಿದೆ. ಈ ಎಲ್ಲದರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರವನ್ನೂ ಕಾಡುತ್ತಿದೆ. ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ ಎಂದಿದೆ.