ಬೆಂಗಳೂರು:- ಬಿಟ್ ಕಾಯಿನ್ ಕೇಸ್ ಗೆ ಸಂಬಧಪಟ್ಟಂತೆ ಮೊಹಮ್ಮದ್ ನಲಪಾಡ್ ಎಸ್ಐಟಿ ನೋಟಿಸ್ ಜಾರಿ ಮಾಡಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ನಲಪಾಡ್ ವಿರುದ್ಧ ಶ್ರೀಕಿ ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲ್ಪಾಡ್ ಅವರನ್ನು ಎಸ್ಐಟಿ ಆರೋಪಿ ಎಂದು ಪರಿಗಣಿಸಿದ್ದು, ನೋಟಿಸ್
ಫೆ.7ರಂದು ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ನಲ್ಲಿ ಉಲ್ಲೇಖಿಸಿದೆ.