ಹಾವೇರಿ:– ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಬಿಸಿ ಊಟ ಕಾರ್ಯಕರ್ತೆಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರುನೇ ದಿನಕ್ಕೆ ಕಾಲ್ಲಿಟ್ಟಿದೆ.
ಈ ನಡುವೆ ಧರಣಿ ಸತ್ಯಾಗ್ರಹದಲ್ಲಿ ತೊಡಗಿಕೊಂಡಿದ್ದ ಮಹಿಳೆ ಅಸ್ವಸ್ತಗೊಂಡಿದ್ದು,ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನದಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ಲಲಿತಾ ಸುರೇಶ ಮೋಟೇಬೆನ್ನೂರ ಎಂಬ ಮಹಿಳೆ ಅಸ್ವಸ್ಥಗೊಂಡಿದ್ದಾಳೆ.
ಮಹಿಳರ ಅಸ್ವಸ್ಥಗೊಂಡರು ಆರೋಗ್ಯ ವಿಚಾರಿಸದ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ನಡೆ ಖಂಡಿಸಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.