ಬಾಗಲಕೋಟೆ : ಕರುನಾಡು ಕಂಡ ಅಪ್ರತಿಮ ಹೆಮ್ಮೆಯ ಕುವರ ಡಾ ಪುನೀತ ರಾಜಕುಮಾರ. ಅವರು ಬದುಕಿದ್ದು ಕಡಿಮೆ ಅವಧಿಯಾದರು ಅವರು ಮಾಡಿರುವ ಸಾಧನೆ ಅಪಾರ ಎಂದು ಗ್ರಾಪಂ ಸದಸ್ಯ ದಾನಪ್ಪ ಆಸಂಗಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಡಾ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಪುನೀತ್ ಅವರ 50 ನೇ ಹುಟ್ಟು ಹಬ್ಬದ ಸಂಭ್ರಮಾಚಾರಣೆಯಲ್ಲಿ ಪಾಲ್ಗೋಂಡು ಮಾತನಾಡಿ, ಕನ್ನಡ ಚಲನಚಿತ್ರರಂಗದಲ್ಲಿ ತಮ್ಮದೆಯಾದ ಛಾಪೂ ಮೂಡಿಸಿ ನಾಡಿನ ಜನರ ಮನಗೆದ್ದವರು. ಆದರೆ ಇಂದು ಅವರು ಭೌತಿಕವಾಗಿ ನಮ್ಮನ್ನು ಅಗಲಿರಬಹುದು ಅವರ ನೆನಪು ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿ.ಪುನೀತ ಅವರು ಕಲಾ ಕ್ಷೇತ್ರದ ಜೊತೆ ಜೊತಗೆ ಸಾಮಾಜಿಕವಾಗಿಯೂ ಅವರ ಸೇವೆ ಅಪಾರವಾಗಿದ್ದು. ಇಂತಹ ಮಹಾನ್ ಮೇರು ನಟ ನಮ್ಮ ಜೊತೆ ಇಲ್ಲವೆಂಬುದು ನೆನಪಿಸಿಕೊಂಡರೆ ಜೀವನ ಬೇಸರವೆನಿಸುತ್ತದೆ ಎಂದು ಹೇಳಿದರು.
ನಂತರ ತಾಪಂ ಮಾಜಿ ಸದಸ್ಯ ಗುರುಪಾದಯ್ಯ ಮರಡಿಮಠ ಮಾತನಾಡಿ ಮುಂದಿನ ವರ್ಷದೊಳಗಾಗಿ ಗ್ರಾಮದಲ್ಲಿ ಡಾ ಪುನೀತ್ ಅವರ ಪುತ್ಥಳಿ ಪ್ರತಿಷ್ಠಾಪಿಸುವ ಉದ್ದೇಶವಿದೆ ಗ್ರಾಮದ ಪ್ರವೇಶಕ್ಕೆ ಸರ್ಕಲ್ ನಿರ್ಮಾಣವಾಗಲಿದ್ದು ಈಗಾಗಲೇ ಸ್ಥಳ ಗುರುತಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಸಹಕಾರ ಅಗತ್ಯವೆಂದರು.
ಇದೇ ಸಂದರ್ಭದಲ್ಲಿ ಅಭಿಮಾನಿ ಬಳಗದ ಪಾಂಡುರಂಗ ಹೂಗಾರ.ಹಣಮಂತ ಕಟಗೇರಿ.ದೇವೆಂದ್ರ ಮಹಿಷವಾಡಗಿ.ಸದಾಶಿವ ಮಗದುಮ್. ಬಸವರಾಜ ಯಾದವಾಡ. ಗಂಗಪ್ಪ ಅಮ್ಮಲಜೇರಿ.ಈರಪ್ಪ ಕಡಕಬಾವಿ.ಬಸವರಾಜ ಗಣಿ.ಮಹಾಂತೇಶ ಹಳ್ಳಿ.ಗುರು ಸಂಗಾನಟ್ಟಿ.ಸಂತೋಷ ಖವಾಸಿ.ಆನಂದ ಸಂಗಾನಟ್ಟಿ.ಮಹಾಂತೇಶ ಮನ್ಮಿ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.