ಬೆಂಗಳೂರು:- ಮೊಮ್ಮಗ ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.
ಇಂದು ಎಚ್.ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಸಂಭ್ರಮ.. PM ಮೋದಿ ಸೇರಿ ಹಲವು ಗಣ್ಯರಿಂದ ಶುಭ ಹಾರೈಕೆ!
ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಇಂದು 93ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ ಸರಳವಾಗಿ ದೇವಾಲಯ ಭೇಟಿಯೊಂದಿಗೆ ಆಚರಣೆ ಮುಗಿಸಿದ್ದು, ಯಾವುದೇ ಅದ್ಧೂರಿ ಸಂಭ್ರಮಾಚರಣೆಗೆ ತಡೆ ಹಾಕಿದ್ದಾರೆ.
ಮೊಮ್ಮಗ ಪ್ರಜ್ವಲ್ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್ ಶೇವ್ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು
ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ