ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ ಜರುಗಿದೆ. ಹೆಣ್ಣು-ಗಂಡು ಇಬ್ಬರೂ ಸಮಾನರು ಎನ್ನುವ ಈ ಕಾಲದಲ್ಲಿ ಹೆಣ್ಣುಮಗುವನ್ನು ಹೆತ್ತಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಗಂಡ ಕೊಲೆ ಮಾಡಿರುವ ಘಟನೆ ಜರುಗಿದೆ.
Karnataka Weather: ಕರ್ನಾಟಕದಲ್ಲಿ ಇಂದು ಚಳಿ ಪ್ರಮಾಣ ಹೆಚ್ಚಳ ಸಾಧ್ಯತೆ!
ಕೋಪಗೊಂಡ ಪತಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಕುಂಡ್ಲಿಕ್ ಉತ್ತಮ್ ಕಾಳೆ ರಾತ್ರಿ ಗಂಗಾಖೇಡ್ ನಾಕಾದಲ್ಲಿ ಪತ್ನಿ ಮೈನಾಳನ್ನು ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೈನಾ ಅವರ ಸಹೋದರಿ ನೀಡಿದ ದೂರಿನ ಪ್ರಕಾರ, ಆರೋಪಿಯು ಒಂದೊಮ್ಮೆ ನೀನು ಮೂರನೇ ಸಲವೂ ಹೆಣ್ಣುಮಗುವಿಗೆ ಜನ್ಮ ನೀಡಿದರೆ ಜೀವಂತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಈ ವಿಚಾರವಾಗಿ ಪದೇ ಪದೇ ಜಗಳವಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಹಾಗೆಯೇ ಮಗು ವಿಚಾರವಾಗಿ ಮತ್ತೆ ಜಗಳವಾಗಿತ್ತು, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆಕೆ ಅರಚುತ್ತಾ ಮನೆಯಿಂದ ಓಡಿ ಹೋಗಿದ್ದಾಳೆ. ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಆಕೆ ಅಷ್ಟರಲ್ಲೇ ಸುಟ್ಟುಹೋಗಿದ್ದಳು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.