ನಟಿ ಸುಧಾರಣಿ ಅಂತಿಂತ ಪ್ರತಿಭೆ ಅಲ್ಲ. ಡಾ. ರಾಜ್ ಕುಮಾರ್ ಅವರೇ ಇವರ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟು ಮಗನ ಸಿನಿಮಾಗೆ ನಾಯಕಿಯನ್ನಾಗಿ ಮಾಡಿದವರು.
ಮದುವೆಗೂ ಮುನ್ನವೇ ಸೋಬನ: ಈ ಸಂಪ್ರದಾಯ ಇರೋದು ಬೇರೆಲ್ಲೂ ಅಲ್ಲ ಭಾರತದಲ್ಲೇ!?
ಆ ನಂತರ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಹೀಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲೂ ಕನ್ನಡ ನಾಡಿನ ನಟಿ ಸುಧಾರಾಣಿ ಮಿಂಚಿದ್ದರು. ಈಗಲೂ ಕೈತುಂಬಾ ಅವಕಾಶಗಳನ್ನು ಹೊಂದಿರುವ ಈ ನಟಿಗೆ ಇದೀಗ ಹೆಣ್ಣು ಮಗು ಜನಿಸಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ.
ಅರೆ ಇದೇನಪ್ಪ ಹೆಣ್ಣು ಮಗು ಅಂತ ಯೋಚನೆ ಮಾಡ್ತಿದ್ದೀರಾ ಕನ್ಫೂಜ್ ಆಗ್ಬೇಡಿ. ಇದು ಸೀರಿಯಲ್ ನಲ್ಲಿ ಮರ್ರೆ. ಸುಧಾರಾಣಿ ಅವರಿಗೆ ಈಗ 51 ವರ್ಷ ಆಗಿದ್ದರೂ ಸಿನಿಮಾ & ಧಾರಾವಾಹಿ ಮಾಡಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಟಿ ಸುಧಾರಾಣಿ ಅವರು ಅಭಿನಯಿಸುವ ಧಾರಾವಾಹಿಗಳ ಟಿಆರ್ಪಿ ಕೂಡ ಆಕಾಶ ಮುಟ್ಟುತ್ತದೆ. ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಸುಧಾರಾಣಿ ಅವರ ಆಕ್ಟಿಂಗ್ ಕಣ್ಣು ತುಂಬಿಕೊಳ್ಳುತ್ತಾರೆ. ಇಂತಹ ಸಮಯದಲ್ಲೇ ಸುಧಾರಾಣಿ ಅವರು ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ!
ಅಷ್ಟಕ್ಕೂ ನಟಿ ಸುಧಾರಾಣಿ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡಿರುವುದು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ. ಈ ಧಾರಾವಾಹಿ ಮೂಲಕ ಮತ್ತೆ ಸುಧಾರಾಣಿ ಕನ್ನಡದ ಕಿರುತೆರೆ ಲೋಕದಲ್ಲಿ ಆರ್ಭಟ ತೋರಿಸುತ್ತಿದ್ದು, ಇದೀಗ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ದೊಡ್ಡ ತಿರುವು ಪಡೆದಿದ್ದು ಸುಧಾರಾಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಆದರೆ ಆರೋಗ್ಯ ಏರುಪೇರಾಗಿದ್ದು, ಸಾಕಷ್ಟು ಗಮನ ಸೆಳೆದಿದೆ!