ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೋಳಿ ಸಾಕಣೆ ಕೇಂದ್ರಗಳಲ್ಲಿ ಹತ್ತು ಸಾವಿರ ಕೋಳಿಗಳು ಸಾವನ್ನಪ್ಪಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಕುರೇಕೊಪ್ಪ ಗ್ರಾಮದ ಸರ್ಕಾರಿ ಕೋಳಿ ಸಾಕಣೆ ಕೇಂದ್ರದಲ್ಲಿ 2,400 ಕೋಳಿಗಳು ಸಾವನ್ನಪ್ಪಿದ್ದು, ಇದರ ಮಾದರಿಗಳನ್ನು ಮಧ್ಯಪ್ರದೇಶ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, H5N1 ಇರುವಿಕೆ ದೃಢಪಟ್ಟಿತ್ತು.
ಇದಲ್ಲದೇ ಕಳೆದ ಫೆ.26 ರಂದು ಕಪ್ಪಗಲ್ಲು ಕೋಳಿ ಸಾಕಣೆ ಕೇಂದ್ರದಲ್ಲಿ 8,000 ಕೋಳಿಗಳು ಒಮ್ಮೆಲೆ ಸಾವನ್ನಪ್ಪಿದ್ದು, ಕೋಳಿಗಳು ಹಕ್ಕಿ ಜ್ವರದಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಬಳ್ಳಾರಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರದ ಭೀತಿ: 400ಕ್ಕೂ ಹೆಚ್ಚು ಕೋಳಿಗಳ ಸಾಮೂಹಿಕ ಹತ್ಯೆ!
ಇನ್ನೂ ಜಿಲ್ಲೆಯಲ್ಲಿ ಹಕ್ಕಿ ಜ್ವರ ತಡೆಯಲು ಮತ್ತು ಪರಿಶೀಲಿಸಲು ಪಶು ಸಂಗೋಪನಾ ಇಲಾಖೆಯು 10 ತಂಡಗಳನ್ನು ರಚಿಸಿದೆ. ಈ ತಂಡಗಳು ನಿತ್ಯ ಇಲಾಖೆಗೆ ವರದಿ ನೀಡಲಿವೆ. ಜಿಲ್ಲೆಯು ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಚೆಕ್ಪೋಸ್ಟ್ಗಳಲ್ಲೂ ಪರಿಶೀಲನೆ ನಡೆದಿದೆ. ಬಳ್ಳಾರಿಯಲ್ಲಿ ಒಟ್ಟು 74 ಕೋಳಿ ಫಾರಂಗಳಿವೆ. 14 ಮೊಟ್ಟೆ ಸಂವರ್ಧನಾ ಕೇಂದ್ರಗಳಿವೆ. ಇವುಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.