ಯಲಹಂಕ: ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಪಂ ಬಿಲ್ ಕಲೆಕ್ಟರ್ ಪ್ರದೀಪ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಅವರಿಂದ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಕ್ಷಾ.ವಿ ರವರ ತಂದೆಯವರ ಹೆಸರಿನಲ್ಲಿ ಖಾಲಿ ನಿವೇಶನವಿದ್ದು, ನಿವೇಶನಕ್ಕೆ ಈ-ಖಾತಾ ಮತ್ತು ಮ್ಯೂಟೇಷನ್ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು,
ಕೆಲಸವನ್ನು ಮಾಡಿಕೊಡಲು ಶಿವಕೋಟಿ ಗ್ರಾಮ ಪಂಚಾಯ್ತಿಯ ಬಿಲ್ ಕಲಕ್ಟರ್ ಆದ ಪ್ರದೀಪ್ ರವರು 13,000 ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣವನ್ನು ಕೊಡುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಬಿಲ್ ಕಲಕ್ಟರ್ ಪ್ರದೀಪ್ ರವರನ್ನು ಬಂಧಿಸಿ ತನಿಖೆ ಕೈಗೊಂಡಿರುತ್ತಾರೆ.
Chanakya Niti: ಜೀವನದಲ್ಲಿ ಬೇಗ ಯಶಸ್ವಿ ಆಗಬೇಕಂದ್ರೆ ಚಾಣಕ್ಯ ಹೇಳಿದ ಈ ಮಾತುಗಳನ್ನು ಅನುಸರಿಸಿ.!
ಈ ಟ್ರ್ಯಾಪ್ ಪ್ರಕ್ರಿಯೆಯನ್ನು ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಟ್ಟೂರು, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರವರಾದ ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.