ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ.
ಅದರಂತೆ ನಿನ್ನೆ ತಡರಾತ್ರಿ ಯಲಹಂಕದಲ್ಲಿ ಕವಿತಾ ಎಂಬುವರ ಬೈಕ್ ಕಳ್ಳತನವಾಗಿದ್ದು, ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖಕ್ಕೆ ಕರ್ಚೀಪ್ ಕಟ್ಟಿಕೊಂಡು ಬಂದಿದ್ದ ಅಸಾಮಿಯಿಂದ ಕೃತ್ಯ ಎಸಗಲಾಗಿದೆ.
ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.