ಬೆಂಗಳೂರು: ಹಿಟ್ ಆಂಡ್ ರನ್ಗೆ ಬೈಕ್ ಸವಾರ ಬಲಿಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ಸಕಲವಾರ ಸಮೀಪ ನಡೆದಿದೆ. ಪ್ರತಾಪ್(26) ಸಾವನ್ನಪ್ಪಿದ ಬೈಕ್ ಸವಾರ. ಸ್ನೇಹಿತನ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನ ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ.
Raw banana: ಸಿಹಿಯಾದ ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡ ಆರೋಗ್ಯಕ್ಕೆ ಉತ್ತಮ!
ಹಿಟ್ ಅಂಡ್ ರನ್ ಅಪಘಾತಕ್ಕೆ ಬೈಕ್ ಸವಾರ ಪ್ರತಾಪ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ, ಅಪಘಾತ ನಡೆಸಿದ ವಾಹನದ ತಲಾಶೆಗೆ ಮುಂದಾಗಿದ್ದಾರೆ.