ಆನೇಕಲ್:- ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆ ಕುಂಬಾರನಹಳ್ಳಿ ಗೇಟ್ ಬಳಿ ಜರುಗಿದೆ.
ಕುರುಬೂರು ಶಾಂತಕುಮಾರ್ ಗೆ ಗಂಭೀರ ಗಾಯ; ಪಂಜಾಬ್ನಿಂದ ಬೆಂಗಳೂರಿಗೆ ಏರ್ ಲಿಫ್ಟ್!
ಮುನಿರಾಮಯ್ಯ(58) ಮೃತ ಪಾದಚಾರಿ. ಪಾದಚಾರಿಗೆ ಬೈಕ್ ಸವಾರ ಇಮಾನ್ ಡಿಕ್ಕಿ ಹೊಡೆದಿದ್ದಾರೆ. ಬುಲೆಟ್ ಸವಾರ ಇಮಾನ್ ಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತಿ ವೇಗ ಘಟನೆಗೆ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಪಾದಚಾರಿ ಮುನಿರಾಮಯ್ಯ ಸಾವನ್ನಪ್ಪಿದ್ದಾರೆ.
ಬುಲೆಟ್ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಗಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.