ದಾವಣಗೆರೆ:- ಬೈಕ್ ಅಪಘಾತದಲ್ಲಿ ಯುವಕ ಬಲಿ ಆಗಿದ್ದು, ಮತ್ತೋರ್ವ ಗಂಭೀರವಾಗಿ ಗಾಯವಾಗಿರುವ ಘಟನೆ ದಾವಣಗೆರೆ ನಗರದ ನೂತನ್ ಕಾಲೇಜ್ ಮುಂಭಾಗ ಜರುಗಿದೆ.
ಅಪಘಾತದಲ್ಲಿ ಯುವಕ ಬಲಿಯಾಗಿದ್ದು, ಮತ್ತೊಬ್ಬ ಯುವಕ ಗಂಭೀರ ಗಾಯಗೊಂಡಿದ್ದಾನೆ. ನಿಟ್ಟುವಳ್ಳಿ ಹೊಸ ಬಡಾವಣೆಯ 19 ವರ್ಷದ ಕಾರ್ತಿಕ್ ಮೃತ ಯುವಕ. ಹೊಸ ವರ್ಷ ಸಂಭ್ರಮಾಚರಣೆಗೆ ಸ್ನೇಹಿತರ ಜೊತೆ ಯುವಕ ಆಗಮಿಸುತ್ತಿದ್ದ. ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.