ಬೆಂಗಳೂರು/ಮೈಸೂರು: ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಿಜೆಪಿ ಹೈಕಮಾಂಡ್ (BJP High Command) ಮೈಸೂರಿನಲ್ಲಿ (Mysuru) ಈ ಬಾರಿ ಯದುವೀರ್ ಒಡೆಯರ್ (Yaduveer Wadiyar) ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ.
ಹೌದು. ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ (Pratap Simha) ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು ಅವರ ಜಾಗದಲ್ಲಿ ಮೈಸೂರಿನ ರಾಜವಂಶಸ್ಥರ ಕುಡಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಕಳೆದ ಕೆಲ ದಿನಗಳಿಂದ ಯದುವೀರ್ ಒಡೆಯರ್ ಹೆಸರು ಕೇಳಿ ಬರುತ್ತಿದ್ದರೂ ಅದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿರಲಿಲ್ಲ. ಆದರೆ ಈಗ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯದುವೀರ್ ಒಡೆಯರ್ ಹೆಸರು ಪ್ರಸ್ತಾಪವಾಗಿದೆ
ಈಗಾಗಲೇ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಸಂಪರ್ಕಿಸಿದ್ದು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮೋದಾ ದೇವಿ (Pramoda Devi) ಗ್ರೀನ್ ಸಿಗ್ನಲ್ಗೆ ನಾಯಕರು ಕಾಯುತ್ತಿದ್ದಾರೆ. ಒಂದು ವೇಳೆ ಪ್ರಮೋದಾ ದೇವಿ ಒಪ್ಪಿಗೆ ನೀಡಿದರೆ ಯದುವೀರ್ ಒಡೆಯರ್ ರಾಜಕಿಯ ಪ್ರವೇಶಿಸಲಿದ್ದಾರೆ.