‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಶೋ ಮೂಲಕ ಖ್ಯಾತಿ ಘಳಿಸಿರುವ ನಟ ವಿನಯ್ ಗೌಡ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ವಿನಯ್ ಸಾಲು ಸಾಲು ಸಿನಿಮಾಗಳಿಗೆ ನಟಿಸಲು ಭರ್ಜರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
‘ಬಿಗ್ ಬಾಸ್’ ಅನೇಕರ ಬದುಕನ್ನು ಬದಲಿಸಿದೆ. ಇದರಲ್ಲಿ ವಿನಯ್ ಅವರ ಹೆಸರು ಸೇರ್ಪಡೆ ಆಗಿದೆ. ತಮಗೆ ಬಂದ ಸಿನಿಮಾ ಆಫರ್ಗಳ ಬಗ್ಗೆ, ಬದುಕು ಬದಲಾದ ಬಗ್ಗೆ ವಿನಯ್ ಸಂತಸ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಬಳಿಕ ‘ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳವರೆಗೆ ನನ್ನನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬರ ಬಾಯಲ್ಲೂ ನನ್ನ ಹೆಸರು ಇದೆ’ ಎಂದಿದ್ದಾರೆ ವಿನಯ್.
![Demo](https://ainlivenews.com/wp-content/uploads/2023/12/spoorthi-1.jpg)
ವಿನಯ್ ಗೌಡ ಅವರು ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯಕ್ಕೆ ಅವರು ಕಿರುತೆರೆಯಲ್ಲಿ ಲೀಡ್ರೋಲ್ ಮಾಡೋ ಆಲೋಚನೆಯಲ್ಲಿ ಇಲ್ಲ. ಅವರಿಗೆ ಕೈ ತುಂಬಾ ಸಿನಿಮಾ ಆಫರ್ಗಳು ಸಿಕ್ಕಿವೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದಿದ್ದಾರೆ ವಿನಯ್ ಗೌಡ.
ಧಾರಾವಾಹಿ ಒಪ್ಪಿಕೊಂಡರೆ ಬೇರೆ ವಿಷಯಗಳ ಮೇಲೆ ಗಮನ ಹರಿಸೋಕೆ ಆಗಲ್ಲ ಅನ್ನೋದು ವಿನಯ್ ಅಭಿಪ್ರಾಯ. ಕನ್ನಡದಿಂದ ಬಂದಿರೋ ಎರಡೂ ಆಫರ್ಗಳು ದೊಡ್ಡ ಸಿನಿಮಾಗಳು. ಇದರಲ್ಲಿ ಸ್ಟಾರ್ ಹೀರೋಗಳು ನಟಿಸುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಹೀರೋ ಆಗಿಯೂ ಅವರಿಗೆ ಆಫರ್ ಬರುತ್ತಿದೆ. ‘ಪ್ರೊಡಕ್ಷನ್ ಕಡೆಯಿಂದ ಶೀಘ್ರವೇ ಈ ಬಗ್ಗೆ ಅನೌನ್ಸ್ ಆಗಲಿದೆ’ ಎಂದು ತಿಳಿಸಿದ್ದಾರೆ.
‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದಾರೆ ವಿನಯ್ ಗೌಡ. ಈ ಪಾತ್ರಗಳಿಗೆ ಅಗತ್ಯ ಇರೋ ಸಿದ್ಧತೆಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಬೇಕು ಎಂದು ವಿನಯ್ ತಮ್ಮ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)