ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ.
ನೀವು ಪದೇ- ಪದೇ ಬಾತ್ರೂಮ್ ಗೆ ಹೋಗ್ತೀರಾ!? ಹಾಗಿದ್ರೆ ದೇಹದಲ್ಲಿ ಇದು ಕಡಿಮೆ ಆಗಿದೆ ಎಂದರ್ಥ!
ಹೌದು, 120 ದಿನದ ಪಯಣ.. ಸಿಕ್ಕ ಪಟ್ಟೆ ಮನರಂಜನೆ ಕೊಟ್ಟ ಟಾಸ್ಕ್.. ನಾಲ್ಕು ಟಫೆಸ್ಟ್ ಕಂಟೆಸ್ಟೆಂಟ್.. ನೂರಾರು ಲೆಕ್ಕಾಚಾರ.. ಗೆಲುವು ಯಾರದ್ದು ಅನ್ನೋ ಕುತೂಹಲ.. ಸದ್ಯ ಇವೆಲ್ಲಕ್ಕೂ ತೆರೆ ಬಿದ್ದಿದೆ.. ಕನ್ನಡ ಬಿಗ್ ಬಾಸ್ ಪ್ರಿಯರು ಕಾತುರದಿಂದ ಕಾಯ್ತಿದ್ದ ಕ್ಷಣ ಕೊನೆಗೂ ಬಂದಿದೆ.
ಬಿಗ್ ಬಾಸ್ ಸೀಸನ್ ಟ್ರೋಪಿ ಹಿಡಿಯೋರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಟ್ಟಿದೆ. ಬಿಗ್ ಬಾಸ್ ವಿನ್ನರ್ ಯಾರ್ ಇರಬಹುದು ಅಂತಾ ಜನ ಗೆಸ್ ಮಾಡಿದ್ರೋ ಅವರೇ ಸೀಸನ್ 11ರ ವಿನ್ನರ್ ಆಗಿದ್ದಾರೆ.. ಎಸ್.. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕೊಟ್ಟು, ತನ್ನ ಮುಗ್ದತೆಯಿಂದ ಕನ್ನಡಿಗರ ಮನಗೆದ್ದಿದ್ದ ಹನುಮಂತು ಸೀಸನ್ 11ರ ಟ್ರೋಫಿಗೆ ಮುತ್ತಿಟ್ಟಿದ್ದಾನೆ.
ನಾನು ನನ್ ಥರನೇ ಆಟ ಆಡ್ದೆ.. ನಾನು ಇದ್ದಂಗೆ ಇದ್ದೆ. ನಾನಿರೋದೆ ಹೀಗೆ.. ಬಿಗ್ ಬಾಸ್ ಕನ್ನಡದ ಕಳೆದ 11 ಸೀಸನ್ ಗಳಲ್ಲಿ ಇಂಥ ನೂರಾರು ಮಾತುಗಳನ್ನು ಕೇಳಿರ್ತೀವಿ.. ನಾನು ನೇರ ಅಂದೋರು ಮತ್ತೊಬ್ಬರ ಬೆನ್ನ ಹಿಂದೆ ನಿಂತು ಮಾತಾಡೋದನ್ನು ನೋಡಿರ್ತೀವಿ. ಆದರೆ ಬಂದಂಗೆ ಇದ್ದವ್ರು.. ಇದ್ದಂಗೆ ಗೆದ್ದವ್ರು ಅಂದರೆ ಅದು ಹನುಮಂತ.. ಎಸ್.. ಬಿಗ್ ಬಾಸ್ ಕನ್ನಡ ಸೀಸನ್ 11ನೆ ವಿನ್ನರ್ ಆಗಿ ಹನುಮಂತು ಹೊರಹೊಮ್ಮಿದ್ದಾನೆ..
ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿಯಾದಗಲೇ ಆತ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕಿದರು ವೀಕ್ಷಕರು.. ಮನೆಯಲ್ಲಿದ್ದವರೆಲ್ಲಾ ಬಿಗ್ ಬಾಸ್ ಅಂದರೆ ಅನಾಮಿಕ ದನಿ ಅಂದುಕೊಂಡು ಆಟವಾಡ್ತಿದ್ದ ಮನೆ ಮಂದಿ ಮಧ್ಯೆ ಹನುಮಂತ ವಿಭಿನ್ನವಾಗಿದ್ದ.. ಕಾಣದ ಬಿಗ್ ಬಾಸ್ ನನ್ನು ಕೂಡ ಆತ ಮೊದಲ ದಿನವೇ ಮಾತನಾಡಿಸಿದ ಪರಿಯೇ ಹೇಳುತ್ತೆ ಅತನ ಮುಗ್ದತೆಯ ಬಗ್ಗೆ..
ಆತನ ಜರ್ನಿ ಅತಿರೇಖವೂ ಅಲ್ಲ.. ಅತೀತವೂ ಅಲ್ಲ.. ಅದೊಂದು ಸಿಂಪಲ್ ಜರ್ನಿ ಅಂತಾನೇ ಹೇಳಬಹುದು.. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಇದ್ದ ಆತನ ನೇರವಂತಿಕೆ ಬಿಗ್ ಬಾಸ್ ವೀಕ್ಷಕರರ ಮನ ಗೆದ್ದದ್ದು.. ಮಾತು ಮಾತಿಗೂ ಜಗಳ.. ಹೊಡೆದಾಟವನ್ನೇ ಎಂಟರ್ ಟೈನಿಂಗ್ ಅಂದುಕೊಂಡವರ ಮಧ್ಯೆ ಮನರಂಜನೆ ಜೊತೆಗೆ ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ಕೊಟ್ಟವನು ಹನುಮಂತ.. ತನ್ನ ಬಗ್ಗೆ ಇರಬಹುದು.. ತನ್ನ ಎದುರಿಗಿದ್ದವರ ಬಗ್ಗೆ ಇರಬಹುದು ನೇರವಾಗಿ ಮಾತಾಡುತ್ತಿದ್ದ ಹನುಮಂತನ ಗುಣಕ್ಕೆ ಸುದೀಪ್ ಕೂಡ ಮೆಚ್ಚಿದ್ರು..
ಹನುಮಂತಗೆ ಗೆಲುವು ಅನ್ನೋದು ಇದೇ ಮೊದಲಲ್ಲ.. ಆತ ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಕೂಡ ಗೆಲುವು ದಾಖಲಿಸಿದ್ದ.. ಯಾವುದೇ ಸಂಗೀತ ಕಲಿಯದೇ ಇದ್ದರೂ ಆತನಿಗೆ ಶಾರದೆಯೂ ಒಲಿದಿದ್ದಳು.. ಆತನ ಜಾನಪದ ಗೀತೆಗಳಲ್ಲಂತೂ ಸರಿಗಮಪ ಜಡ್ಜ್ ಗಳ ಮನಸೆಳೆದಿದ್ದವು.. ಜೊತೆಜೊತೆಗೆ ಹನುಮಂತ ಸಿನಿಮಾ ಗೀತೆಗಳನ್ನು ಕಲಿಯೋಕೆ ನೂರಕ್ಕೆ ನೂರರಷ್ಟು ಎಫರ್ಟ್ ಹಾಕ್ತಿದ್ದ.. ಅದೇ ಕಾರಣಕ್ಕೆ ಆತ ಸರಿಗಮಪದಂತಹ ಅತಿದೊಡ್ಡ ಕಾರ್ಯಕ್ರಮದಲ್ಲಿ ಜಯಶಾಲಿಯಾಗಿದ್ದ.. ಅಲ್ಲೂ ಕೂಡ ಆತನ ಮುಗ್ದತೆ ಆತನ ಗೆಲ್ಲಿಸಿತ್ತು..
ಹನುಮಂತ ಝೀ ಕನ್ನಡ ವೇದಿಕೆಗೆ ಬಂದಾಗ ಆತ ಒಂದು ಲುಂಗಿ ಶರ್ಟ್ ಮೇಲೊಂದು ಟವೆಲ್ ಹಾಕೊಂಡು ಬಂದಿದ್ದ..ಕಾರ್ಯಕ್ರಮದ ಉದ್ದಕ್ಕೂ ಕೂಡ ಆತ ಅದೇ ರೀತಿಯಲ್ಲೇ ಇದ್ದ. ಹಳ್ಳಿ ಹೈದ ಫ್ಯಾಟೆಗ್ ಬಂದ್ಮೇಲೆ, ಅದರಲ್ಲೂ ಸರಿಗಮಪ ವಿನ್ನರ್ ಆದ್ಮೇಲೆ ಆತ ಬದಲಾಗಬಹುದು ಅಂತಾ ಹಲವರು ಅಂದುಕೊಂಡಿದ್ರು. ಆದರೆ ಆ ಬಳಿಕ ಹನುಮಂತು ಜೀ ಕನ್ನಡದ ಹಲವು ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಂಡ್ರು, ನೇಮು ಫೇಮು ಗಳಿಸಿದರು.. ಆತನ ತನ್ನ ಮೂಲವನ್ನು ಮರೆಯಲಿಲ್ಲ.. ಬಿಗ್ ಬಾಸ್ ಗೆ ಬಂದಾಗ್ಲೂ ಕೂಡ ಆತ ಅದೇ ಶರ್ಟ್ ಲುಂಗಿ ಮತ್ತೊಂದು ಟವಲ್ ಹಿಡಿದ್ಕೊಂಡೇ ಬಂದಿದ್ದ.. ಅಷ್ಟೇ ಯಾಕೆ ಬಿಗ್ ಬಾಸ್ ಫಿನಾಲೇ ವೇದಿಕೆಯಲ್ಲೂ ಕೂಡ ಹಾಗೇ ಇದ್ದದ್ದು ಅವನ ಸರಳತೆಯ ತೋರಿಸುತ್ತೆ.. ಈ ಸರಳತೆ ಮತ್ತು ಮುಗ್ದತೆಯೇ ಅವನ ಗೆಲ್ಲಿಸಿದೇ ಅಂದರೆ ತಪ್ಪಾಗಲಾರದು..