ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರ ಡ್ರಾಮಾ ಮುಗಿದ ಬಳಿಕ ಇದೀಗ ಡ್ರೋನ್ ಪ್ರತಾಪ್ ಅಳುವ ಸರದಿ. ಮೂರು ವರ್ಷಗಳಿಂದ ಅಪ್ಪ-ಅಮ್ಮನನ್ನು ನೋಡಲಿಲ್ಲವಂತೆ ಪ್ರತಾಪ್. ಇದೀಗ ಬಿಗ್ಬಾಸ್ ಮನೆಯಲ್ಲಿ ಅವರ ನೆನಪಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅವರ ಜೊತೆ ಮಾತನಾಡಬೇಕು ಎಂದು ಕಣ್ಣೀರು ಹಾಕಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದ್ದ ಪ್ರತಾಪ್ ಅಭಿಮಾನಿಗಳೂ ಭಾವುಕರಾಗಿದ್ದಾರೆ. ಅಯ್ಯೋ ಪ್ರತಾಪ್ಗೆ ಏನಾಯ್ತು, ಅವರನ್ನು ಅಪ್ಪ-ಅಮ್ಮನ ಜೊತೆ ಮಾತನಾಡಲು ಬಿಡಿ ಎಂದು ಗೋಗರೆಯುತ್ತಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಮನೆಯ ಮೂವರು ಸದಸ್ಯರಿಗೆ ತಮ್ಮ ಮನೆಯಿಂದ ಬಂದಿರುವ ಪತ್ರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಉಡುಗೊರೆಯಾಗಿ ಈ ಅವಕಾಶ ಕಲ್ಪಿಸಲಾಗಿದೆ. ಮೂವರಲ್ಲಿ ಯಾರಿಗೆ ಅದು ಕೊಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಅದಕ್ಕೆ ಬಹುತೇಕ ಮಂದಿ ತಮಗೇ ಈ ಅವಕಾಶ ನೀಡುವಂತೆ ಗೋಗರೆದಿದ್ದಾರೆ. ಈ ಮೊದಲು ದೀಪಾವಳಿ ಹಬ್ಬಕ್ಕೆ ಮನೆಯಿಂದ ಮಾಡಿರುವ ಸ್ವೀಟ್ಸ್ ತಿನ್ನಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿತ್ತು. ಆಗ ತನೀಷಾ ಅವರಿಗೆ ರೆಡಿಮೇಡ್ ಸ್ವೀಟ್ ಬಂದಿತ್ತು. ಇದರಿಂದ ಅವರು ಈಗ ಕಣ್ಣೀರು ಹಾಕಿದ್ದು, ತಮಗೇ ಅವಕಾಶ ನೀಡುವಂತೆ ಕೋರಿದರು. ಹಬ್ಬಕ್ಕೆ ನನಗೆ ರೆಡಿಮೇಡ್ ಸ್ವೀಟ್ಸ್ ಬಂತು, ನನ್ನ ತಾಯಿ ಮಾಡಿದ ಕೈ ಅಡುಗೆ ತಲುಪಿಲ್ಲ. ನನಗೆ ಅಮ್ಮ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಆಸೆ ಎಂದು ತನಿಷಾ ಕಣ್ಣೀರು ಹಾಕಿದರು
ಮಧ್ಯೆ ಪ್ರವೇಶಿಸಿದ ನಮ್ರತಾ, “ನಾನು ಪ್ರತಾಪ್ಗೆ ಕೊಡಲು ಬಯಸುತ್ತೇನೆ. ಕಾರಣ, ಅವರು ತಮ್ಮ ಮನೆಯವರೊಂದಿಗೆ ಮೂರು ವರ್ಷದಿಂದ ಮಾತನಾಡಿಲ್ಲ. ಹೀಗಾಗಿ ಇದು ಪ್ರತಾಪ್ಗೆ ಸಿಗಲಿ ಎಂದು ಹೇಳಿದರು. ಆಗ ಇನ್ನೋರ್ವ ಸ್ಪರ್ಧಿ ಕಾರ್ತಿಕ್, ಪ್ರತಾಪ್ಗೆ ಅಪ್ಪ-ಅಮ್ಮನ ಮೂರು ವರ್ಷ ಬಿಟ್ಟು ಇದ್ದಾರೆ. ಅವರಿಗೆ ಅಭ್ಯಾಸ ಇದೆ, ನನಗೆ ಅಭ್ಯಾಸ ಇಲ್ಲ. ಆದ್ದರಿಂದ ನನಗೇ ಅವಕಾಶ ಕೊಡಬೇಕು ಎಂದರು. ಇಷ್ಟು ಹೇಳುತ್ತಿದ್ದಂತೆಯೇ ಪ್ರತಾಪ್ ಕಣ್ಣೀರ ಕಟ್ಟೆ ಒಡೆಯಿತು. ನನಗೇ ಅವಕಾಶ ಕೊಡಿ. ನನಗೂ ನನ್ನ ತಂದೆ-ತಾಯಿಯನ್ನು ನೋಡಬೇಕು, ನನಗೆ ಗೊತ್ತಾಗಬೇಕು ಅವರು ನನ್ನೊಂದಿಗೆ ಮಾತನಾಡುತ್ತಿದ್ದಾರಾ, ಇಲ್ವಾ ಅಂತ ಎಂದು ಬಿಕ್ಕಿ ಬಿಕ್ಕಿ ಅತ್ತರು. ಕೂಡಲೇ ಮನೆಯ ಇತರ ಸದಸ್ಯರು ಸಮಾಧಾನ ಹೇಳಿ, ಧೈರ್ಯ ತುಂಬಿದರು. ಇದರ ಪ್ರೊಮೋ ಬಿಡುಗಡೆ ಆಗಿದೆ.