‘ಬಿಗ್ ಬಾಸ್’ ಸೀಸನ್ 7ರ (Bigg Boss Kannada 7) ಸ್ಪರ್ಧಿ ರಕ್ಷಾ ಸೋಮಶೇಖರ್ (Raksha Somashekar) ಅವರು ಗೆಳೆಯ ನತನ್ ಜಾನಿ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕಳೆದ ವರ್ಷ ಮೇನಲ್ಲಿ ನತನ್ ಜಾನಿ ಜೊತೆ ರಕ್ಷಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ಅದ್ದೂರಿಯಾಗಿ ನಟಿ ಮದುವೆಯಾಗಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಟಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ್ದಾರೆ. ರಕ್ಷಾ- ನತನ್ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.
ರಕ್ಷಾ ಮದುವೆಗೆ ‘ಅಶ್ವಿನಿ ನಕ್ಷತ್ರ’ ಖ್ಯಾತಿಯ ಯಮುನಾ ಶ್ರೀನಿಧಿ ಭಾಗಿಯಾಗಿದ್ದು, ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.