ಬಿಗ್ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟಿರುವ ರಜತ್ ಗೆ ಇದೀಗ ಟ್ರೋಲ್ ಪೇಜ್ ಗಳ ಕಾಟ ಹೆಚ್ಚಾಗಿದೆ. ರಜತ್ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಆಗಿದ್ದು ಇದು ರಜತ್ ಕುಟುಂಬಕ್ಕೆ ಸಂಕಷ್ಟ ತಂದೊಡ್ಡಿದೆ.
ರಜತ್ ಮಾಜಿ ಗೆಳತಿಯೊಂದಿರುವ ಫೋಟೋ ಅಪ್ ಲೋಡ್ ಮಾಡಿದ ಟ್ರೋಲಿಗರು ಬಳಿಕ ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಪರಿಚಿತರು ನೀಡಿದ ಯುಪಿಐ ಐಡಿಗೆ ರಜತ್ ತಾಯಿ 6,500 ರೂ. ಹಣವನ್ನು ಹಾಕಿದ್ದಾರೆ. ಹಣ ಹಾಕುತ್ತಿದ್ದಂತೆ ಬೇರೆ ಟ್ರೋಲ್ ಪೇಜ್ಗಳಲ್ಲಿ ಫೋಟೋ ಅಪ್ಲೋಡ್ ಆಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಟ್ರೋಲ್ ಪೇಜ್ಗಳ ಹಾವಳಿಗೆ ಬೇಸತ್ತು ರಜತ್ ಪತ್ನಿ ಅಕ್ಷಿತಾ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಟ್ರೋಲ್ ಪೇಜ್ಗಳಲ್ಲಿ ಅಪ್ಲೋಡ್ ಆಗಿದ್ದ ಫೋಟೋಗಳು ಡಿಲೀಟ್ ಮಾಡಲಾಗಿದೆ.