ಕನ್ನಡದ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿಕೊಟ್ಟಿದ್ದ ಗೋಲ್ಡ್ ಸುರೇಶ್ ಮನೆಯ ಕ್ಯಾಪ್ಟನ್ ಆಗಿರುವಾಗಲದೇ ದೊಡ್ಮನೆಯಿಂದ ಹೊರ ಬಂದಿದ್ದರು. ಯಾರು ಊಹಿಸಿರದ ರೀತಿಯಲ್ಲಿ ಹೊರ ಬಂದ ಗೋಲ್ಡ್ ಸುರೇಶ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗೋಲ್ಡ್ ಸುರೇಶ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬಂದು ಹಲವು ದಿನಗಳೇ ಕಳೆದಿದೆ. ಬಳಿಕ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಇದೀಗ ಏಕಾಏಕಿ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ.
ಬಿಗ್ಬಾಸ್ ಮನೆಯಲ್ಲಿದ್ದಾಗ ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಅವರ ಕಾಲಿಗೆ ಗಂಭೀರವಾಗಿ ಪೆಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ, ಇಂದು ಗೋಲ್ಡ್ ಸುರೇಶ್ ಅವರಿಗೆ ಆಪರೇಷನ್ ನಡೆಯಲಿದೆ. ಈ ವಿಚಾರ ತಿಳಿದು ಗೋಲ್ಡ್ ಸುರೇಶ್ ಅಭಿಮಾನಿಗಳು ಆತಂಕಗೊಂಡಿದ್ದಾರೆ.