ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್ನ ಈ ಯೋಜನೆಯಿಂದ ಬಹುತೇಕರು ಪ್ರಯೋಜನ ಪಡೆದಿದ್ದಾರೆ. ರಾಜ್ಯದೆಲ್ಲೆಡೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಜನರಿಗೆ ಸಿಕ್ಕಿಲ್ಲ.
ಹೌದು, ಕಳೆದ ಎರಡು ತಿಂಗಳಿಂದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಬಿದ್ದಿಲ್ಲ. ಹಲವರು ಈ ಬಗ್ಗೆ ಗೊಂದಲಕ್ಕೂ ಒಳಗಾಗಿದ್ದಾರೆ. ಆದರೆ ಇದೀಗ ಗೃಹಲಕ್ಷ್ಮಿ 16ನೇ ಕಂತಿನ ಹಣದ ಬಗ್ಗೆ ಸ್ಪಷ್ಟ ಮಾಹಿತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ.
PM Surya Ghar Yojana: ನಿಮ್ಮ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಬೇಕಾ..? ಹಾಕಿದ್ರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
16 ನೇ ಕಂತಿನ ಹಣ ಇದೇ ತಿಂಗಳು ಅಂದರೆ ಜನವರಿ 14ನೇ ತಾರೀಖಿನಿಂದ ಗೃಹಲಕ್ಷ್ಮಿ 16ನೇ ಕಂತಿನ 2000 ಹಣವನ್ನು ಜಮಾ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿಸಿದ್ದಾರೆ ಮತ್ತು ಜನವರಿ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ 16ನೇ ಕಂತಿನ ಹಣವನ್ನು ಜಮಾ ಮಾಡುತ್ತಿವೆ ಎಂಬ ಮಾಹಿತಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ 16ನೇ ಕಂತಿನ ಹಣ ವರ್ಗಾವಣೆ ಮಾಡಲು ಈಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಹಣವನ್ನು ಆರ್ಥಿಕ ಇಲಾಖೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ ಮತ್ತು ಹಣ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದ್ದು ಜನವರಿ 14ನೇ ತಾರೀಖಿನಿಂದ ಹಣ ಜಮಾ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.