ಭಾರತೀಯ ರಿಸರ್ವ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೆಟ್ವರ್ಕ್ಗಳು ಹಾಗೂ ಕಾರ್ಡ್ ನೀಡುವ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೌದು 2024-25ನೇ ಹಣಕಾಸು ಸಾಲು ಏಪ್ರಿಲ್ ತಿಂಗಳಿಂದ ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಹಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬದಲಾವಣೆಗಳಾಗಲಿದ್ದು, ಇವು ನಿಮ್ಮ ಹಣದ ವೆಚ್ಚ ಹಾಗೂ ಹೂಡಿಕೆ ಮೇಲೆ ಪರಿಣಾಮ ಬೀರಲಿವೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.
ಇಲ್ಲವಾದರೆ ಮುಂದೆ ತೊಂದರೆ ಎದುರಾಗಬಹುದು. ಈಗಾಗಲೇ ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರಿಗೆ ತಮ್ಮ ಕಾರ್ಡ್ ಅನ್ನು ಅಪ್ಡೇಟ್ ಮಾಡುವ ಸಂದರ್ಭದಲ್ಲಿ ಕಾರ್ಡ್ ನೆಟ್ವರ್ಕ್ ಅನ್ನು ಬದಲಾಯಿಸುವ ಆಯ್ಕೆ ಸಿಗಲಿದೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ಗಳು ಒಂದರಿಂದ ಹಲವು ವರ್ಷಗಳ ಮಾನ್ಯತೆ ಹೊಂದಿರುತ್ತವೆ. ಕಾರ್ಡ್ನ ಅವಧಿ ಮುಗಿದ ನಂತರ ನಿಮಗೆ ಇಷ್ಟ ಬಂದ ನೆಟ್ವರ್ಕ್ಗೆ ಬದಲಾಯಿ ಸಬಹುದು.
ಎಸ್ ಬಿಐ ಕ್ರೆಡಿಟ್ ಕಾರ್ಡ್:
ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಏಪ್ರಿಲ್ 1, 2024 ರಿಂದ ಎಸ್ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಏಪ್ರಿಲ್ 1 ರಿಂದ, ನೀವು ಬಾಡಿಗೆ ಪಾವತಿ ಮಾಡಿದರೆ, ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್ಗಳನ್ನು ನೀಡಲಾಗುವುದಿಲ್ಲ. ಈ ನಿಯಮವು ಏಪ್ರಿಲ್ 1 ರಿಂದ ಕೆಲವು ಕ್ರೆಡಿಟ್ ಕಾರ್ಡ್ಗಳಿಗೆ ಅನ್ವಯಿಸುತ್ತದೆ ಮತ್ತು ಕೆಲವು ಕ್ರೆಡಿಟ್ ಕಾರ್ಡ್ಗಳಿಗೆ ಈ ನಿಯಮವು ಏಪ್ರಿಲ್ 15 ರಿಂದ ಅನ್ವಯಿಸುತ್ತದೆ.
ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬದಲಾವಣೆಗಳು:
ಕ್ಯಾಲೆಂಡರ್ ತ್ರೈಮಾಸಿಕದಲ್ಲಿ 10,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸುವ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಪೂರಕ ದೇಶೀಯ ಲಾಂಜ್ ಪ್ರವೇಶ ಪಡೆಯಲು ಏಪ್ರಿಲ್ 1ರಿಂದ ಅರ್ಹರಾಗಿದ್ದಾರೆ.
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬದಲಾವಣೆಗಳು:
ಮುಂಬರುವ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ 35,000ರೂ. ವ್ಯಯಿಸಿದರೆ ನೀವು ಒಂದು ಪೂರಕ ಏರ್ ಪೋರ್ಟ್ ಲಾಂಜ್ ಪ್ರವೇಶ ಪಡೆಯಬಹುದು. ಏಪ್ರಿಲ್-ಮೇ-ಜೂನ್ 2024ರ ತ್ರೈಮಾಸಿಕದಲ್ಲಿ ಈ ಬಹುಮಾನದ ಲಾಂಜ್ ಸೇವೆಗೆ ಅರ್ಹರಾಗಲು ನೀವು ಕನಿಷ್ಠ 35,000 ರೂ. ವ್ಯಯಿಸಬೇಕು. ಹಾಗೆಯೇ ಅದರ ನಂತರದ ತ್ರೈಮಾಸಿಕಗಳಲ್ಲಿ ಕೂಡ ಅಷ್ಟೇ ಹಣ ವ್ಯಯಿಸಬೇಕು.