ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಎಂಬುವವರು ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವ್ಯಕ್ತಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಅಳುತ್ತಿರುವ ಲೈವ್ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಆ ವ್ಯಕ್ತಿ ತನ್ನ ಆತ್ಮಹತ್ಯೆಗೆ ತನ್ನ ಹೆಂಡತಿಯೇ ಕಾರಣ ಎಂದು ದೂಷಿಸಿದ್ದಾರೆ. ಈ ಪ್ರಕರಣದಲ್ಲಿ ಮೃತನ ತಂದೆ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೀಟ್ ರೂಟ್ ಸೇವಿಸುವುದರಿಂದ ನೀವು ದಪ್ಪ, ಉದ್ದ ಕೂದಲನ್ನು ಪಡೆಯಬಹುದು..!
ಇದೀಗ ಪತ್ನಿ ವಿಡಿಯೋ ಮಾಡಿ ಪತಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ ನಿಕಿತಾ ಈಗ ಮಾನವ್ ಶರ್ಮಾನೇ ನನ್ನನ್ನು ಹೊಡೆಯುತ್ತಿದ್ದ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾರೆ. ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ದಿನ ನನ್ನನ್ನು ನನ್ನ ತಾಯಿಯ ಮನೆಗೆ ಬಿಟ್ಟಿದ್ದರು. ಅವರು ನನ್ನ ಬಗ್ಗೆ ಆರೋಪ ಮಾಡಿರುವುದೆಲ್ಲಾ ನನ್ನ ಹಿಂದಿನ ವಿಷಯಗಳು. ಈ ಹೇಳಿಕೆಗಳು ಮದುವೆಯ ನಂತರದ ಜೀವನಕ್ಕೆ ಸಂಬಂಧಿಸಿಲ್ಲ.
ಅವರು ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಾನು ಮೂರು ಬಾರಿ ಅವರನ್ನು ತಡೆದಿದ್ದೇನೆ. ಅವರು ಮದ್ಯಪಾನ ಮಾಡಿ ನನ್ನನ್ನು ಹೊಡೆಯುತ್ತಿದ್ದರು. ಈ ಬಗ್ಗೆ ಮಾನವ್ ಅಪ್ಪ ಅಮ್ಮನಿಗೂ ತಿಳಿಸಿದ್ದೇನೆ ಎಂದು ನಿಕಿತಾ ವಿಡಿಯೋ ಮೂಲಕ ತಿಳಿಸಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)ನಲ್ಲಿ ಉದ್ಯೋಗಿಯಾಗಿದ್ದ ಮಾನವ್ ಶರ್ಮಾ ಫೆ.24ರಂದು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಾನವ್ ಶರ್ಮಾ ಪತ್ನಿ ನಿಕಿತಾ ವಿರುದ್ಧ ವಿಡಿಯೋ ಮೂಲಕ ಆರೋಪ ಮಾಡಿದ್ದರು.