ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಪೊಲೀಸರು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಘಟನೆ ಸಂಬಂಧ ಒಂದು ದಿನ ಜೈಲು ವಾಸ ಅನುಭವಿಸಿದ್ದ ನಟ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೂಲಕ ಹೊರ ಬಂದಿದ್ದಾಋಎ. ಇದೀಗ ಪೊಲೀಸರು ನಟನಿಗೆ ಮತ್ತೆ ಶಾಕ್ ನೀಡಿದ್ದಾರೆ.
ಕಾಲ್ತುಳಿತದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಲ್ಲು ಅರ್ಜುನ್ ಹಾಗೂ ಥಿಯೇಟರ್ ಮಾಲೀಕರನ್ನು ಬಂಧಿಸಿದರು. ಆದರೆ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೇಳೆ ಸೆಲೆಬ್ರಿಟಿಗಳು ಬರಲಿದ್ದಾರೆ. ಹೀಗಾಗಿ ಭದ್ರತೆ ಬೇಕು ಎಂದು ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಭದ್ರತೆಯನ್ನು ಕೋರಿದ್ರು ಎಂದು ವರದಿ ಆಗಿದೆ.
ಚಿಕ್ಕಡಪಲ್ಲಿ ಪೊಲೀಸರು ಇದೀಗ ಟ್ವಿಸ್ಟ್ ನೀಡಿದ್ದಾರೆ. ಮೊದಲಿಗೆ ಅಲ್ಲು ಅರ್ಜುನ್ ಯಾವುದೇ ಪೂರ್ವ ಮಾಹಿತಿ ನೀಡದೆ ಥಿಯೇಟರ್ಗೆ ಬಂದಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ರು. ಆದ್ರೆ ಇದೀಗ ಥಿಯೇಟರ್ ಲೆಟರ್ ಹೊರಬಿದ್ದ ಮೇಲೆ ಅಲ್ಲು ಅರ್ಜುನ್ ಅಭಿಮಾನಿಗಳು ಅಲ್ಲು ಅರ್ಜುನ್ ಅವರದ್ದು ತಪ್ಲೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಆದ್ರೆ ಪೊಲೀಸರು ಇದೀಗ ಸಾಕ್ಷಿ ನೀಡಿದ್ದಾರೆ.
ಆದರೆ, ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಥಿಯೇಟರ್ ಗೆ ಪುಷ್ಪ 2 ಚಿತ್ರತಂಡಕ್ಕೆ ಬರಬಾರದು ಎಂದು ಲಿಖಿತವಾಗಿ ಪತ್ರದ ಮೂಲಕ ಸೂಚಿಸಿದ್ದರು ಎನ್ನಲಾಗ್ತಿದೆ. ಈ ಕುರಿತು ಪತ್ರ ಕೂಡ ಹೊರಬಿದ್ದಿದೆ. ಪುಷ್ಪ 2 ಚಿತ್ರತಂಡಕ್ಕೆ ಥಿಯೇಟರ್ಗೆ ಬರಲು ಅನುಮತಿ ನೀಡಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ಅನುಮತಿಯಿಲ್ಲದೆ ಥಿಯೇಟರ್ಗೆ ಬಂದಿದ್ದರು. ಸಿನಿಮಾ ನೋಡಿ ಹೊರಡುವಾಗ ಅನುಮತಿ ಪಡೆಯದೇ ರ್ಯಾಲಿ ಮೂಲಕ ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಇದು ಅಲ್ಲು ಅರ್ಜುನ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎನ್ನಲಾಗುತ್ತಿದೆ.