ಯಾದಗಿರಿ:- ಇಲ್ಲಿನ ಶಹಾಪುರದಲ್ಲಿನ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರನ ರೈಸ್ ಮಿಲ್ ನಲ್ಲಿ ಬರೋಬ್ಬರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ.
ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಗೆ ಸೇರಿದ ರೈಸ್ ಮಿಲ್ ಇದಾಗಿದ್ದು, ಗುರುಮಠಕಲ್ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ರೈಸ್ ಮಿಲ್ ನಿಂದ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಾಲಿಶ್ ಮಾಡಿದ್ದ 630 ಕ್ವಿಂಟಾಲ್ ಪಡಿತರ ಅಕ್ಕಿ ಸೇರಿ 700 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ.
630 ಕ್ವಿಂಟಾಲ್ ಪಾಲಿಶ್ ಮಾಡಿರೋ ಪಡಿತರ ಅಕ್ಕಿಯ ಜೊತೆಗೆ ಪಾಲಿಶ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದ 70 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ.
ರಾಜು ರಾಠೋಡ್ ಗೆ ಅಕ್ಕಿ ಮಾರಾಟ ಮಾಡಿರೋದಾಗಿ ಪೊಲೀಸರ ಮುಂದೆ ವಿಚಾರಣೆ ವೇಳೆ ಬಂಧಿತ ಆರೋಪಿಗಳು ಬಾಯ್ಬಿಟ್ಟಿದರು. ಈ ಹಿನ್ನೆಲೆ ರಾಜು ರಾಠೋಡ್ ರೈಸ್ ಮಿಲ್ ಮೇಲೆ ದಾಳಿ ನಡೆಸಿ ಅಕ್ಕಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.
ಶಹಾಪುರ ಅಕ್ಕಿ ಪ್ರಕರಣದಲ್ಲಿ ರಾಜು ರಾಠೋಡ್ ಭಾಗಿ ಆಗಿದ್ದು, ಕಳೆದ 15 ದಿನಗಳಿಂದ ರಾಜು ರಾಠೋಡ್ ತಲೆ ಮರೆಸಿಕೊಂಡಿದ್ದ.
ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದ ವಿಶೇಷ ತಂಡದಿಂದ ಅಕ್ಕಿ ನಾಪತ್ತೆ ಪ್ರಕರಣದ ತನಿಖೆ ನಡೆಯುತ್ತಿದ್ದು, ರಾಠೋಡ್ ಬ್ರದರ್ಸ್ ಬಂಧನಕ್ಕೆ ಪೊಲೀಸ್ ತಂಡ ಬಲೆ ಬೀಸಿದೆ.
ಶಹಾಪುರ ಠಾಣೆ ಸಿಪಿಐ ಎಸ್.ಎಂ. ಪಾಟೀಲ್, ಗೋಗಿ ಠಾಣೆ ಪಿಎಸ್ಐ ದೇವೇಂದ್ರ ರೆಡ್ಡಿ ಒಳಗೊಂಡ ತಂಡದಿಂದ ರಾಠೋಡ್ ಬ್ರದರ್ಸ್ ಗಾಗಿ ತೀವ್ರ ಶೋಧ ನಡೆದಿದೆ.