ಬೆಂಗಳೂರು: ಸ್ಯಾಂಡಲ್ವುಡ್ಗೆ ಮಠ, ಎದ್ದೇಳು ಮಂಜುನಾಥನಂತಹ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಬರಹಗಾರ, ನಿರ್ಮಾಪಕ, ನಟ, ನಿರ್ದೇಶಕರಾಗಿದ್ದ ಗುರುಪ್ರಸಾದ್ (52) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇದೀಗ ಗುರುಪ್ರಸಾದ್ ಅವರು ಸಾವಿಗೆ ಮುಂಚೆ ಅವರ ಪತ್ನಿಯೊಡನೆ ಆಡಿದ್ದ ಮಾತಿನ ಆಡಿಯೋ ವೈರಲ್ ಆಗಿದೆ. ಪತ್ನಿಯೊಡನೆ ಫೋನ್ನಲ್ಲಿ ಜಗಳವಾಡಿದ್ದ ಗುರುಪ್ರಸಾದ್, ನಿನಗೆ, ಮಗಳಿಗೆ ಏನಾದರೂ ಸ್ವಲ್ಪ ಹಣ ಮಾಡಿ ಸತ್ತು ಹೋಗಿಬಿಡುತ್ತೇನೆ ಎಂದಿದ್ದರು.
ಶೇ. 90ರಷ್ಟು ಸಹಾಯಧನದಲ್ಲಿ ‘ಕೃಷಿ ಸಿಂಚಾಯಿ ಯೋಜನೆ’ಯಡಿ ಹನಿ ನೀರಾವರಿ ಸೌಲಭ್ಯ..!
ಆ ಫೋನ್ ಕಾಲ್ನಲ್ಲಿ ಪದೇ ಪದೇ ಗುರುಪ್ರಸಾದ್ ಸಾಯುವ ಮಾತನ್ನಾಡಿದ್ದರು. ಈ ಆಡಿಯೋವನ್ನು ಸ್ವತಃ ಗುರುಪ್ರಸಾದ್ ಅವರೇ ರೆಕಾರ್ಡ್ ಮಾಡಿ ಆಪ್ತರಿಗೆ ಕಳುಹಿಸಿದ್ದರಂತೆ. ಅವರ ಸಾವಿನ ನಂತರ ಈ ಆಡಿಯೋ ಕ್ಲಿಪ್ ವೈರಲ್ ಆಗಿದೆ.