ಬೆಂಗಳೂರು: ಕೋಟಿ ಕೋಟಿ ಮೌಲ್ಯದ ಚಿನ್ನ ವಂಚನೆ ಮಾಡಿರುವ ಕೇಸ್ನಲ್ಲಿ ಸಿಲುಕಿಕೊಂಡಿರುವ ಐಶ್ವರ್ಯಗೌಡ ಬಗ್ಗೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದಲ್ಲಿ ಬಗೆದಷ್ಟು ಒಂದೊಂದೇ ವಂಚನೆಗಳು ಬಯಲಾಗ್ತಿವೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಸಾಕಷ್ಟು ಜನರಿಗೆ ವಂಚಿಸಿರುವ ಆರೋಪಿತೆ ಐಶ್ವರ್ಯ ಗೌಡ ಬಗ್ಗೆ ಮಾಜಿ ಸಚಿವ ಶಾಸಕ ವಿನಯ್ ಕುಲಕರ್ಣಿ ಮೊದಲಬಾರಿಗೆ ಪ್ರತಿಕ್ರಿಯೇ ನೀಡಿದ್ದಾರೆ . ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ಮಾಜಿ ಸಂಸದ ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಹಾಗು ಕೋಟಿ ಕೋಟಿ ರೂಪಾಯಿಗಳ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡಳ ಹಿಸ್ಟರಿ ಬಗೆದಷ್ಟು ಸ್ಪೋಟಕ ಮಾಹಿತಿಗಳು ಸಿಗ್ತಾಯಿವೆ.. ಇನ್ನು ಐಶ್ವರ್ಯಾಗೌಡ ಜೊತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹೆಸ್ರು ಥಳಕು ಹಾಕಿಕೊಂಡಿತ್ತು. ಈ ಹಿನ್ನೆಲೆ ಮಾಜಿ ಸಚಿವ ವಿನಯ್ ಕುಲಕರ್ಣಿ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
KPSC Recruitment: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ತಿಂಗಳಿಗೆ ₹ 48,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಎಲ್ಲಮ್ಮ ದೇವಿಯ ದರ್ಶನ ಮಾಡಿಸಿ ಅಂತ ಐಶ್ವರ್ಯ ಗೌಡ ನನ್ನ ಪರಿಚಯ ಮಾಡಿಕೊಂಡಿದ್ಳು ನಾನು ನಮ್ಮ ಶಾಸಕರಿಗೆ ಹೇಳಿದ್ದೆ ಮೂರ್ನಾಲ್ಕು ಬಾರಿ ಐಶ್ವರ್ಯ ನನ್ನ ಭೇಟಿ ಮಾಡಿದ್ದಾರೆ. ನನ್ನ ಅವರ ಮಧ್ಯೆ ಯಾವುದೇ ವ್ಯವಹಾರ ಇಲ್ಲ. ಐಶ್ವರ್ಯಳ ಯಾವ ಕಾರು ನನ್ನ ಬಳಿ ಇಲ್ಲ ಇದ್ರೆ ಪೊಲೀಸ್ರು ತೆಗೆದುಕೊಂಡು ಹೋಗಲಿ ಆಕೆ ಡಿಕೆ ಸುರೇಶ್ , ನಿಖಿಲ್ಕುಮಾರ್ ಸ್ವಾಮಿ ಸೇರಿದಂತೆ ಹಲವರ ಹೆಸ್ರು ಹೇಳಿಕೊಂಡಿದ್ದಾರೆ. ನನಗೆ ಇದ್ರಿಂದ ನನ್ನ ಹೆಸರಿಗೆ ಯಾವೂದೇ ಡ್ಯಾಮೇಜ್ ಆಗಿಲ್ಲ ರಾಜಕಾರಣಿಗಳು ಅಂದ್ರೆ ನೂರ್ ಜನ ಬರ್ತಾರೆ ಹೋಗ್ತಾರೆ ಅಂತಾ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ರು
ಇನ್ನು ಐಶ್ವರ್ಯಗೌಡಳ ಗಂಡ ಹೆಸರಿನಲ್ಲಿ ಇರುವ ಬೆನ್ಜ್ ಕಾರು ವಿನಯ್ ಕುಲಕರ್ಣಿಗೆ ಕೊಟ್ಟಿದ್ದೇನೆ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ರು. ಹೀಗಾಗಿ ವಿನಯ್ ಕುಲಕರ್ಣಿ ಗೆ ನೋಟೀಸ್ ಕೋಡೋದಿಕ್ಕೆ ಪೊಲೀಸರು ಇನ್ನಿದ ಕಸರತ್ತು ಮಾಡಿದ್ರು. ಕೆಎ 03 ಎಂ ಎನ್ 8181 ನಂಬರಿನ ಬೆನ್ಜ್ ಕಾರ್ ಐಶ್ವರ್ಯ ಗೌಡ ಪತಿ ಹರೀಶ್ ಹೆಸರಿನಲ್ಲಿದೆ ಈ ಕಾರನ್ನ ಐಶ್ವರ್ಯ, ವಿನಯ್ ಕುಲಕರ್ಣಿಗೆ ನೀಡಿರೊ ಬಗ್ಗೆ ಪೊಲೀಸ್ರ ವಿಚಾರಣೆ ವೇಳೆ ಹೇಳಿದ್ರು. ಹೀಗಾಗಿಯೆ ವಿನಯ್ ಕುಲಕರ್ಣಿ ಗೆ ಎಫ್ ಐ ಆರ್ ಸಂಬಂಧ ನೋಟಿಸ್ ನೀಡಲು ಕೋರ್ಟ್ ಬಳಿ ಬಂದಿದ್ದ ಚಂದ್ರಲೇಔಟ್ ಸಬ್ ಇನ್ಸ್ಪೆಕ್ಟರ್ ಬೆಂಜ್ ಕಾರನ್ನ ಹಾಜರು ಪಡಿಸುವಂತೆ ನೋಟೀಸ್ ನೀಡಲು ಮುಂದಾಗಿದ್ರು. ಆದ್ರೆ ವಿನಯ್ ಕುಲಕರ್ಣಿ ನೋಟೀಸ್ ಪಡೆಯಲು ನಿರಾಕರಿಸಿ ನನ್ನ ಬಳಿ ಕಾರ್ ಇಲ್ಲ ಇದ್ರೆ ತಗೊಂಡೋಗಿ ಎಂದಿದ್ದಾರೆ.
ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡ್ತಿದ್ದ ಐಶ್ವರ್ಯ ಗೌಡ, ವಂಚನೆ ಮಾಡಿರುವ ಪಟ್ಟಿಯಲ್ಲಿ ಡಾಕ್ಟರ್ ಕೂಡಾ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಆರ್ ಆರ್ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಡಾ.ಮಂಜುಳಾ ಪಾಟೀಲ್ ಎನ್ನುವವರನ್ನು ತಾನು ಡಿಕೆ ಸುರೇಶ್ ತಂಗಿ ಎಂದು ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಅವರಿಂದ 2,52,60,000ಹಣ 2 ಕೆಜಿ 350 ಗ್ರಾಂ ಚಿನ್ನಾಭರಣ ಸೇರಿ ಒಟ್ಟು ಐದು ಕೋಟಿ ರೂ.ನಷ್ಟು ಐಶ್ವರ್ಯ ಗೌಡ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದ ಐಶ್ವರ್ಯ, ನಾನು ಡಿಕೆ ಸುರೇಶ್ ತಂಗಿ ಎಂದು ವೈದ್ಯರಿಗೆ ಪರಿಚಯ ಮಾಡಿಕೊಂಡಿದ್ದಾಳೆ.
ಗೊಲ್ಡ್ ಬ್ಯಸಿನೆಸ್ ,ಕೆಸಿನೋ, ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾಳೆ. ಬ್ಯುಸಿನೆಸ್ ಮೇಲೆ ಹೂಡಿಕೆ ಮಾಡಿ ಎಂದು 5ಕೋಟಿಯಷ್ಟ ಹಣ ಪೀಕಿದ್ದಾಳೆ. 2022 ರಿಂದ ಇಲ್ಲಿವರೆಗೂ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿದ್ದಾಳೆ ಎಂದು ವೈದ್ಯರು ದೂರು ನೀಡಿದ್ದಾರೆ. ಸದ್ಯ ಐಶ್ವರ್ಯಾಗೌಡ ಇನ್ನಷ್ಟು ಜನರಿಗೆ ವಂಚನೆ ಮಾಡಿರುವ ಮಾಹಿತಿ ಇದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ…