ಬೆಂಗಳೂರು:- ಕರ್ನಾಟಕ ಸೇರಿ ಇಡೀ ದೇಶದಲ್ಲೇ ಬಹಳ ಚರ್ಚೆ ಹುಟ್ಟು ಹಾಕಿದ ಪ್ರಕರಣ ಮುಡಾ ಹಗರಣ ಕೇಸ್.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಒಂದು ನಡೆದಿದ್ದು, ರಾತ್ರೋ ರಾತ್ರಿ 48 ಸೈಟ್ಗಳು ರದ್ದಾಗಿದೆ.
ಬಿಡಿಎ ಹೌಸಿಂಗ್ ನಿರ್ಮಾಣ ಕೇಸ್ ನಲ್ಲಿ BSYಗೆ ಸಂಕಷ್ಟ: ಪ್ರಾಸಿಕ್ಯೂಷನ್ಗೆ ಕೋರಿ ರಾಜ್ಯಪಾಲರಿಗೆ ಕಡತ ರವಾನೆ!
ಮುಡಾ ಕ್ಲೀನ್ಗೆ ಮೊದಲ ಹೆಜ್ಜೆ ಇಟ್ಟಿರುವ ಸಿಎಂ ಸಿದ್ದರಾಮಯ್ಯ ರಾತ್ರೋರಾತ್ರಿ 48 ಸೈಟ್ಗಳನ್ನು ರದ್ದು ಮಾಡಿದ್ದಾರೆ. ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ 48 ಜನರಿಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಸೈಟ್ ಗಳನ್ನು 5-6 ಲಕ್ಷಕ್ಕೆ ಹಂಚಿದ್ದರು. ಅದನ್ನು ಇದೀಗ ರದ್ದುಪಡಿಸಲಾಗಿದೆ.
ಅಸ್ತಿತ್ವವೇ ಇಲ್ಲದೆ ಸಹಕಾರ ಸಂಘದ ಹೆಸರಿನಲ್ಲಿ ಸೈಟ್ಗಳನ್ನು ದಿನೇಶ್ ಕುಮಾರ್ ಹಂಚಿಕೆ ಮಾಡಿದ್ದರು. ಚಾಮುಂಡೇಶ್ವರಿ ನಗರ ಸರ್ವೊದಯ ಸಂಘದ ಸದಸ್ಯರು ಎಂದು ಹಂಚಿಕೆ ಮಾಡಿದ್ದರು. ಸೈಟ್ ಹಂಚಿಕೆಯಲ್ಲಿ ಬೇನಾಮಿ ಇದೆ ಎಂಬ ಆರೋಪ ಬಂದಿತ್ತು. ಇದು ಬಹುದೊಡ್ಡ ಅಕ್ರಮ ಎಂದು ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ವರದಿ ಕೊಟ್ಟಿದ್ದರು
ಆ ವರದಿಯನ್ನು ಆಂತರಿಕವಾಗಿ ತನಿಖೆ ಮಾಡಿಸಿದ್ದ ರಾಜ್ಯ ಸರ್ಕಾರ ನಿನ್ನೆ ರಾತ್ರೋ ರಾತ್ರಿ ಎಲ್ಲಾ 48 ಸೈಟ್ ಗಳನ್ನು ರದ್ದು ಪಡಿಸಿದೆ. ಈ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ.