ಬೆಂಗಳೂರು:- ಬೆಂಗಳೂರು ವಾಹನ ಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ಹೊರ ಬಿದ್ದಿದ್ದು, 8 ತಿಂಗಳು ಟ್ರಾಫಿಕ್ ಜಾಮ್ ಉಂಟಾಗಿದೆ.
ಜುಲೈ 29 ರಿಂದ ಪೀಣ್ಯ ಪ್ಲೈಓವರ್ ಮೇಲೆ ಎಲ್ಲಾ ಮಾದರಿಯ ವಾಹನಗಳು ಓಡಾಡಬಹುದು ಎಂದು ಐಐಎಸ್ಇಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದರೆ, ಪ್ರತಿ ಶುಕ್ರವಾರ ಇಲ್ಲಿ ಫ್ಲೈಓವರ್ ಸಂಪೂರ್ಣ ಬಂದ್ ಮಾಡಬೇಕು. ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎಂದು ಐಐಎಸ್ಸಿ ತಜ್ಞರು ಸೂಚನೆ ನೀಡಿದ್ದರು.
Gujarat: ನಿರ್ಮಾಣ ಹಂತದಲ್ಲಿದ್ದ ಬುಲೆಟ್ ಟ್ರೈನ್ ಸೇತುವೆ ಕುಸಿದು ಮೂವರು ಕಾರ್ಮಿಕರು ಸಾವು!
ಈ ಹಿನ್ನೆಲೆ ದಿನನಿತ್ಯದ ಕಾರ್ಯಗಳಿಗೆ ಓಡಾಡುವ ವಾಹನ ಸವಾರರನ್ನು ಹೊರತುಪಡಿಸಿ, ವೀಕೆಂಡ್ಗಳಿಗೆ ತುಮಕೂರು ಮಾರ್ಗವಾಗಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆಗಳಿಗೆ ಹೋಗುವವರಿಗೆ ಈ ಫ್ಲೈಓವರ್ ವರದಾನವಾಗಿತ್ತು. ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೆ ಬೆಂಗಳೂರು ಬಿಟ್ಟು ಹೊರಹೋಗಲು ಅನುಕೂಲವಾಗುತ್ತಿತ್ತು. ಆದರೆ, ಪ್ರತಿ ಶುಕ್ರವಾರ ಈ ಫ್ಲೈಓವರ್ ಬಳಸಲು ಆಗದೆ ಜನರು ಟ್ರಾಫಿಕ್ನಲ್ಲೇ ಇರಬೇಕಾದ ಪರಿಸ್ಥಿತಿ ಸದ್ಯಕ್ಕಿದೆ.
ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ, ಪಿಲ್ಲರ್ಗಳಲ್ಲಿ ಕೇಬಲ್ ಬದಲಿಸುವ ಕಾರ್ಯ ಕೇವಲ ಒಂದು ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಕೇಬಲ್ ಬದಲಿಸುವ ಕಾರ್ಯ ಇನ್ನೂ 8 ತಿಂಗಳವರೆಗೆ ಮುಂದುವರೆಯಲಿದೆ.
ಯಾವುದೇ ಕಾರಣಕ್ಕೂ ಫ್ಲೈಓವರ್ ನಲ್ಲಿ ಮತ್ತೆ ಸಮಸ್ಯೆ ಎದುರಾಗಬಾರದು ಎಂಬ ಅನ್ನೊ ಕಾರಣಕ್ಕೆ 1400 ಕೇಬಲ್ಗಳನ್ನು ಅಳವಡಿಸಲು ಐಐಎಸ್ಸಿ ಸೂಚಿಸಿದ್ದು, ಇದರಲ್ಲಿ ಇದುವರೆಗೂ 700 ಕೇಬಲ್ಗಳನ್ನು ಮಾತ್ರ ಬದಲಿಸಲಾಗಿದೆ. ತುಕ್ಕು ಹಿಡಿದಿರುವ ಎಲ್ಲಾ ಕೇಬಲ್ ಬದಲಿಸಲು ಮುಂದಾಗಿರುವುದರಿಂದ ಆ ಕಾಮಗಾರಿ ನಡೆಯುತ್ತಿದೆ. ಇನ್ನುಳಿದ ಕೇಬಲ್ಗಳನ್ನು ಅಳವಡಿಸಲು ಮುಂದಿನ 8 ತಿಂಗಳವರೆಗೆ ಸಮಯ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲಿಯವರೆಗೂ ಪ್ರತಿ ಶುಕ್ರವಾರ ಫ್ಲೈಓವರ್ ಬಂದ್ ಆಗಿರಲಿದೆ ಎಂದು ಐಐಎಸ್ಸಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಚಂದ್ರ ಕಿಶನ್ ತಿಳಿಸಿದ್ದಾರೆ.