ಬೆಂಗಳೂರು:– ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಈ ಮೂಲಕ ನಗರದ ಪ್ರತಿಷ್ಟಿತ ಮಂತ್ರಿ ಮಾಲ್ ಗೆ ಶಾಕ್ ನೀಡಿದಂತಾಗಿದೆ.
ತೆರಿಗೆ ಹಣ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ಅಲ್ಲದೇ ಮಾಲ್ ಸೀಜ್ ಮಾಡಲಾಗಿದೆ. 32 ಕೋಟಿ ರುಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಾಲ್ ಗೆ ಬೀಗ ಜಡಿಯಲಾಗಿದೆ.
ಈ ಹಿಂದೆಯೂ ಹಲವು ಬಾರಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಸೂಚನೆ ನೀಡಿತ್ತು. ಆದರೆ ಮಂತ್ರಿ ಮಾಲ್ ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಬೀಗ ಜಡಿಯಲಾಗಿದೆ.