ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿ ಸಿರುವ ನಟ ಹೊರ ಬರುವುದನ್ನೇ ಕಾಯುತ್ತಿದ್ದಾರೆ. ಈ ಮಧ್ಯೆ ಐಟಿ ಅಧಿಕಾರಿಗಳ ವಿಚಾರಣೆ ಜಾಮೀನಿಗೆ ತೊಡಕಾಗಹುದು ಎಂದು ಜೈಲಿನಲ್ಲಿರುವ ದರ್ಶನ್ ಟೆನ್ಷನ್ನಲ್ಲಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 30 ರಂದು ಕೋರ್ಟ್ನಿಂದ ನಟ ದರ್ಶನ್ ಗೆ ಜಾಮೀನು ಸಿಗುವ ನಿರೀಕ್ಷೆ ಇದೆ. ಆದರೆ ಎರಡು ಮೂರು ದಿನಗಳ ಹಿಂದೆ 84 ಲಕ್ಷ ರೂಪಾಯಿಗಳ ವಹಿವಾಟಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೇ ಜಾಮೀನಿಗೆ ತೊಡಕಾಗಬಹುದು ಎಂದು ದರ್ಶನ್ ಟೆನ್ಷನ್ಗೆ ಒಳಗಾಗಿದ್ದಾರೆ. ವಿಚಾರಣೆಯ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ನಡೆದಿರುವ ಮೇಲೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬೆಲ್ಗೆ ತಡೆ ತರುವ ಸಾಧ್ಯತೆ ಇದೆ.
ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡ ಕೇಸ್ನಿಂದ ಜಾರಿಕೊಳ್ಳುವ ತಂತ್ರ ಇದೀಗ ದರ್ಶನ್ಗೆ ಮತ್ತಷ್ಟು ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಐಟಿ ಹಾಗೂ ಪವಿತ್ರಾ ಗೌಡ ನಿಲುವು ನೋಡಿಕೊಂಡು ದರ್ಶನ್ ಕಾನೂನು ಹೋರಾಟಕ್ಕೆ ಮುಂದಾಗಬಹುದು. ಹೀಗಾಗಿ ದರ್ಶನ್ ಪರ ವಕೀಲರು ಮತ್ತೊಂದು ಬಾರಿ ನಟನಿಂದ ಪೂರ್ಣ ಮಾಹಿತಿ ಪಡೆಯಲಿದ್ದಾರೆ.