ವಾಟ್ಸಪ್ (Whatssap) ಇಲ್ಲಿಯವರೆಗೆ ನೀಡುತ್ತಿದ್ದ ಫ್ರೀ ಗೂಗಲ್ ಡ್ರೈವ್ (Google Drive) ಸ್ಟೋರೇಜ್ ಅನ್ನು 2024ರ ಮಧ್ಯದಲ್ಲಿ ನಿಲ್ಲಿಸಲಿದೆ.
ಈಗಾಗಲೇ ವಾಟ್ಸಪ್ ಬೀಟಾ ಅವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಸೆಟ್ಟಿಂಗ್ಸ್ನಲ್ಲಿ ಗೂಗಲ್ ಡ್ರೈವ್ ಬ್ಯಾಕಪ್ ಆಯ್ಕೆಯನ್ನು ತೋರಿಸುತ್ತಿದೆ. ವಾಟ್ಸಪ್ನಲ್ಲಿ ಇಲ್ಲಿಯವರೆಗೆ ಚಾಟ್, ಫೋಟೋ, ವಿಡಿಯೋಗಳು ಗೂಗಲ್ ಡ್ರೈವ್ನಲ್ಲಿ ಸೇವ್ ಆಗುತ್ತಿತ್ತು. ಇದಕ್ಕೆ ಯಾವುದೇ ಮಿತಿ ಇರುತ್ತಿರಲಿಲ್ಲ.
ಯಾಕೆ ಈ ಬದಲಾವಣೆ?
ಯಾವ ಕಾರಣಕ್ಕೆ ಈ ಬದಲಾವಣೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ವಾಟ್ಸಪ್ ಮತ್ತು ಗೂಗಲ್ ಇಲ್ಲಿಯವರೆಗೆ ಹೇಳಿಲ್ಲ. ಎಲ್ಲರಿಗೂ ಫ್ರೀ ಕ್ಲೌಡ್ ಸ್ಟೋರೇಜ್ ನೀಡುವುದು ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕೆ ವಾಟ್ಸಪ್ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಮಾಲೀಕತ್ವವನ್ನು ಹೊಂದಿರುವ ಗೂಗಲ್ ಉಚಿತ 15 ಜಿಬಿ ಮಿತಿ ಮಗಿದ ಬಳಿಕ ಮತ್ತೆ ಡ್ರೈವ್ನಲ್ಲಿ ಸ್ಟೋರ್ ಮಾಡಿದರೆ ಶುಲ್ಕ ವಿಧಿಸುತ್ತದೆ. ಆದರೆ ಇಲ್ಲಿಯವರೆಗೆ ವಾಟ್ಸಪ್ ಡೇಟಾಗಳು ಸ್ಟೋರ್ ಆಗಿದ್ದಕ್ಕೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ.
ಪ್ರಸ್ತುತ ಗೂಗಲ್ ಡ್ರೈವ್ನಲ್ಲಿ ಗರಿಷ್ಠ 15 ಜಿಬಿವರೆಗಿನ ಡೇಟಾವನ್ನು ಸೇವ್ ಮಾಡಬಹುದು. ಜಿಮೇಲ್, ಫೋಟೋ, ಡ್ರೈವ್ ಡೇಟಾ… ಎಲ್ಲಾಸೇರಿ 15ಜಿಬಿ ಸಂಗ್ರಹಕ್ಕೆ ಮಾತ್ರ ಅನುಮತಿ ನೀಡುತ್ತದೆ. ಇನ್ನು ಮುಂದೆ ವಾಟ್ಸಪ್ ಡೇಟಾ ಸೇರಿದಂತೆ ಎಲ್ಲಾ ಡೇಟಾಗಳು 15 ಜಿಬಿ ಮಿತಿ ಒಳಗಡೆ ಇರಬೇಕಾಗುತ್ತದೆ.
ಒಂದು ವೇಳೆ ಇದಕ್ಕಿಂತ ಹೆಚ್ಚಿನ ಪ್ರಮಾಣದ ಡೇಟಾವನ್ನು ಗೂಗಲ್ ಡ್ರೈವ್ನಲ್ಲಿ ಸೇವ್ ಮಾಡಬೇಕಾದರೆ ಗೂಗಲ್ ಒನ್ (Google One) ಮೂಲಕ ಸಬ್ಸ್ಕ್ರೈಬ್ ಆಗಿ ತಿಂಗಳ ಮತ್ತು ವರ್ಷದ ಪ್ಲ್ಯಾನ್ ಖರೀದಿಸಬೇಕು.
ಗೂಗಲ್ ಒನ್ನಲ್ಲಿ ಬೇಸಿಕ್ 100 ಜಿಬಿ ಡೇಟಾಗೆ 3 ತಿಂಗಳು 35 ರೂ. ಪಾವತಿಸಿ ನಂತರ ಪ್ರತಿ ತಿಂಗಳು 130 ರೂ. ಪಾವತಿಸಬೇಕಾಗುತ್ತದೆ