ಭಾರತದಿಂದ ವಿದೇಶಗಳಿಗೆ ಡಿಜಿಟಲ್ ಪಾವತಿಯ ಪ್ರಮುಖ ಸಾಧನವಾಗಿ ಯುಪಿಐ ಈಗ ಮಾರ್ಪಟ್ಟಿದೆ. ಇದನ್ನು ಇ-ರಿಕ್ಷಾಗಳು, ದಿನಸಿ ಅಂಗಡಿಗಳು, ಮೆಟ್ರೋ ನಿಲ್ದಾಣಗಳು ಮತ್ತು ಶ್ರೀಲಂಕಾ, ಭೂತಾನ್, ಯುಎಇ, ಮಾರಿಷಸ್ ಮತ್ತು ಫ್ರಾನ್ಸ್ನಂತಹ ದೇಶಗಳಲ್ಲಿಯೂ ಬಳಸಲಾಗುತ್ತಿದೆ.
ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಾವತಿ ನಿಗಮ – ಎನ್ಪಿಸಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಅಡಿಯಲ್ಲಿ, ವಿಶೇಷ ಅಕ್ಷರಗಳನ್ನು ಹೊಂದಿರುವ UPI ಐಡಿಗಳನ್ನುಇನ್ನು ಮುಂದೆ ಮಾನ್ಯವೆಂದು ಪರಿಗಣಿಸಲಾಗವುದಿಲ್ಲ. ಅಂದರೆ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಿರುವ UPI ಐಡಿಗಳನ್ನು ಮಾತ್ರ ಮಾನ್ಯ ಎನ್ನಲಾಗುತ್ತದೆ. ಈ ಹೊಸ ನಿಯಮವು ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ.
ನಿಮ್ಮ UPI ಐಡಿಯಲ್ಲಿ ವಿಶೇಷ ಅಕ್ಷರಗಳು ಹಾಗೂ ಯಾವುದೇ ಚಿಹ್ನೆಗಳನ್ನು ಬಳಸಬಾರದು ಎಂದು ಎನ್ಪಿಸಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಇಂತಹ ಚಿಹ್ನೆ ಇದ್ದಲ್ಲಿ ಫೆಬ್ರವರಿ 1 ರ ನಂತರ ನಿಮ್ಮ ವಹಿವಾಟನ್ನು ನಿರ್ಬಂಧಿಸಬಹುದು.
UPI ಬಳಕೆದಾರರು ಏನು ಮಾಡಬೇಕು?
ನಿಮ್ಮ ಯುಪಿಐ ಐಡಿಯಲ್ಲಿ ಯಾವುದೇ ವಿಶೇಷ ಅಕ್ಷರವಿದ್ದರೆ, ಅದನ್ನು ಆದಷ್ಟು ಬೇಗ ಬದಲಾಯಿಸಿ. ನಿಮ್ಮ ಬ್ಯಾಂಕ್ ಅಥವಾ ಪಾವತಿ ಅಪ್ಲಿಕೇಶನ್ ಅನ್ನು ಸಂಪರ್ಕಿಸಿ ಮತ್ತು ಹೊಸ ಆಲ್ಫಾನ್ಯೂಮರಿಕ್ ಐಡಿಯನ್ನು ರಚಿಸಿ, ಇದರಿಂದ ಫೆಬ್ರವರಿ 1 ರ ನಂತರವೂ ನಿಮ್ಮ UPI ವಹಿವಾಟುಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತವೆ.