ಬೆಂಗಳೂರು:-ರಾಜ್ಯದಲ್ಲಿ ಬರುವ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ: ಸಚಿವ ದಿನೇಶ್ ಗುಂಡೂರಾವ್
ಕೆಲ ಜಿಲ್ಲೆಗಳಲ್ಲಿ ಫೆಬ್ರವರಿ ಮೊದಲ ವಾರವೇ 32 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಸಾಮಾನ್ಯವಾಗಿ ಫೆಬ್ರವರಿ ಪೂರ್ತಿ ತಿಂಗಳು ಚಳಿ ಇರುತ್ತದೆ. ಮಾರ್ಚ್ನಿಂದ ಬಿಸಿಲಿನ ಝಳ ಶುರುವಾಗುತ್ತದೆ. ಆದ್ರೆ ಈ ಬಾರಿ ಫೆಬ್ರವರಿಯ ತಿಂಗಳಲ್ಲಿಯೇ ಬಿಸಿಲಿನ ತಾಪಮಾನ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಸುಮಾರು 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬೇಗೆ ಇನ್ನೂ ಹೆಚ್ಚಾಗುವ ಸೂಚನೆ ಇದೆ. ಮಾರ್ಚ್ನಿಂದ ಬೇಸಿಗೆ ಆರಂಭವಾಗಿಲಿದ್ದು, ಈ ಬಾರಿ ಮಳೆ ಮತ್ತು ಚಳಿಯ ಪ್ರಮಾಣವೂ ಕೂಡ ಹೆಚ್ಚಾಗಿತ್ತು. ಇನ್ನು ಬೇಸಿಗೆ ಕಾಲದ ಬಿಸಿಲು ಹಾಗೂ ಸೆಕೆಯೂ ಕೂಡ ಅಧಿಕವಾಗಲಿದೆ, ಮುನ್ನೆಚ್ಚರಿಕೆಯಿಂದ ಇರಿ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.