8 ಬಲಿಷ್ಠ ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025 ನಾಳೆ, ಫೆಬ್ರವರಿ 19 ರಂದು ಪ್ರಾರಂಭವಾಗಲಿದೆ. ಈ ಪಂದ್ಯಾವಳಿಗೆ ಪಾಕಿಸ್ತಾನ ಆತಿಥೇಯ ರಾಷ್ಟ್ರ ಎಂದು ತಿಳಿದಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ತಿಂಗಳ 20 ರಂದು ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ, ಟೂರ್ನಿ ಆರಂಭವಾಗುವ ಕೆಲವೇ ಗಂಟೆಗಳು ಹಾಗೂ ಟೀಮ್ ಇಂಡಿಯಾದ ಮೊದಲ ಪಂದ್ಯಕ್ಕೂ ಎರಡು ದಿನಗಳ ಮೊದಲು ಭಾರತ ತಂಡಕ್ಕೆ ಶಾಕ್ ಎದುರಾಗಿದೆ..
ಟೀಮ್ ಇಂಡಿಯಾದ ಮುಖ್ಯ ಬೌಲಿಂಗ್ ಕೋಚ್ ಆಗಿದ್ದ ಮೋರ್ನೆ ಮೋರ್ಕೆಲ್ ತಂಡವನ್ನು ತೊರೆದು ತಮ್ಮ ತವರು ದೇಶವಾದ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ. ಹೌದು ತಂದೆ ನಿಧನವಾದ್ದರಿಂದ ಮಾರ್ಕೆಲ್ ಟೀಮ್ ಇಂಡಿಯಾವನ್ನು ತೊರೆಯಬೇಕಾಗಿರುವ ಪರಿಸ್ಥೀತಿ ನಿರ್ಮಾಣವಾಗಿದೆ.
ನಿಮಗೆ ಗೊತ್ತೆ..? ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳ ಜೊತೆ ದೈಹಿಕ ಸಂಬಂಧ ಇರುತ್ತೆ..!
2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದ ಮಾರ್ಕೆಲ್ ಭಾನುವಾರ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದ್ದರು. ಆದರೆ, ಸೋಮವಾರ ಅವರು ತಂಡದೊಂದಿಗೆ ಕಾಣಿಸಿಕೊಂಡಿಲ್ಲ. ತನ್ನ ತಂದೆಯ ಮರಣದ ಸುದ್ದಿ ಕೇಳಿದ ಕೂಡಲೇ ಅವರು ಬಿಸಿಸಿಐ ಅನುಮತಿ ಪಡೆದು ದುಬೈನಿಂದ ದಕ್ಷಿಣ ಆಫ್ರಿಕಾಕ್ಕೆ ತರಾತುರಿಯಲ್ಲಿ ಹೊರಟರು ಎಂದು ತಿಳಿದುಬಂದಿದೆ.
ಈ ದುಃಖದ ಸಮಯದಲ್ಲಿ ಬಿಸಿಸಿಐ ಮಾರ್ಕೆಲ್ ಅವರ ಬೆಂಬಲಕ್ಕೆ ನಿಂತಿದೆ ಮತ್ತು ತಕ್ಷಣವೇ ಅವರಿಗೆ ಪ್ರಯಾಣದ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ, ಮಾರ್ಕೆಲ್ ಯಾವಾಗ ಮರಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಕಷ್ಟದಿಂದ ಅವರು ಚೇತರಿಸಿಕೊಂಡು ಟೀಮ್ ಇಂಡಿಯಾ ಜೊತೆ ಮತ್ತೆ ಒಂದಾಗುತ್ತಾರೆ ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಶಿಸುತ್ತದೆ.
ಏಕೆಂದರೆ… ಚಾಂಪಿಯನ್ಸ್ ಟ್ರೋಫಿಯಂತಹ ಪ್ರತಿಷ್ಠಿತ ಟೂರ್ನಿಯಲ್ಲಿ, ತಂಡಕ್ಕೆ ಮುಖ್ಯ ಕೋಚ್ ಇಲ್ಲದಿದ್ದರೆ, ಟೂರ್ನಿಗಾಗಿ ಬೌಲರ್ಗಳಿಗೆ ತರಬೇತಿ ನೀಡುವುದು ಕಷ್ಟಕರವಾಗುತ್ತದೆ. ಇದು ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಸಹಾಯಕ ಸಿಬ್ಬಂದಿಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.